ಬೆಂಗಳೂರು :ಸಿಎಂ ಬಿ ಎಸ್ ಯಡಿಯೂರಪ್ಪ ಭಾಗವಹಿಸಿದ್ದ ಕಿಟ್ ವಿತರಣಾ ಕಾರ್ಯಕ್ರಮ ಆರಂಭದಲ್ಲಿ ಅತ್ಯಂತ ಶಿಸ್ತಾಗಿ ನಡೆಯಿತು. ಅವರು ತೆರಳಿದ ಬಳಿಕ ಜನರೆಲ್ಲ ಜಮಾವಣೆಗೊಂಡು, ಕೋವಿಡ್ ನಿಯಮ ಉಲ್ಲಂಘಿಸಿದರು. ಬಿಬಿಎಂಪಿ ಮಾಜಿ ಸದಸ್ಯ ಸಿ ಕೆ ರಾಮಮೂರ್ತಿ, ಜಯನಗರದ 5ನೇ ಬ್ಲಾಕ್ ಚಂದ್ರಗುಪ್ತ ಮೌರ್ಯ ಕ್ರೀಡಾಂಗಣದಲ್ಲಿ ಇಂದು ಕೋವಿಡ್ ವಾರಿಯರ್ಸ್ಗೆ ಸನ್ಮಾನ ಹಾಗೂ ಬಡವರಿಗೆ ದಿನಸಿ ಕಿಟ್ ಹಂಚಿಕೆ ಕಾರ್ಯಕ್ರಮ ಆಯೋಜಿಸಿದ್ದರು.
ಸಮಾರಂಭಕ್ಕೆ ಸಿಎಂ ಬಿ ಎಸ್ ಯಡಿಯೂರಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಅವರು ಬಂದು ಕಾರ್ಯಕ್ರಮ ನೆರವೇರಿಸಿ ತೆರಳುವವರೆಗೂ ಅತ್ಯಂತ ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಯಿತು.
ವೇದಿಕೆ ಮೇಲೆ ತಲಾ ಹತ್ತು ಮಂದಿಗೆ ಸಾಂಕೇತಿಕವಾಗಿ ಸನ್ಮಾನ, ಫಲಾನುಭವಿಗಳಿಗೆ ದಿನಸಿ ಕಿಟ್ ವಿತರಿಸಿದ ಸಿಎಂ ಬಿಎಸ್ವೈ ಅಲ್ಲಿಂದ ತೆರಳಿದರು. ಇದಾದ ತಕ್ಷಣ ಕಾರ್ಯಕ್ರಮಕ್ಕೆ ಆಗಮಿಸಿ ಟೋಕನ್ ಪಡೆದಿದ್ದ ಸಾವಿರಾರು ಮಂದಿ ಜನರು ಕೌಂಟರ್ಗಳತ್ತ ನುಗ್ಗಿದರು.