ಕರ್ನಾಟಕ

karnataka

ETV Bharat / state

ಗಂಭೀರ ಕಾಯಿಲೆ ಅಥವಾ ಮನೆಯಲ್ಲಿ ಯಾರಾದರೂ ಮೃತಪಟ್ಟರೆ ಮಾತ್ರ ರಜೆ : ಅಸಮಾಧಾನಕ್ಕೆ‌ ಕಾರಣವಾದ ಡಿಸಿಪಿ‌ ಆದೇಶ

ಆಗ್ನೇಯ ವಿಭಾಗದ ಡಿಸಿಪಿ‌ ಸಿ.ಕೆ. ಬಾಬಾ ಅನಿವಾರ್ಯ ಕಾರಣ ಹೊರತುಪಡಿಸಿ ಪದೇ ಪದೇ ರಜೆ ಪಡೆದುಕೊಂಡರೆ ಅಂತಹವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು‌ ಎಂದು ಆದೇಶ ಹೊರಡಿಸಿದ್ದಾರೆ.

disciplinary-action-for-asking-for-leave-without-reason
ಅಸಮಾಧಾನಕ್ಕೆ‌ ಕಾರಣವಾದ ಡಿಸಿಪಿ‌ ಆದೇಶ

By

Published : Nov 2, 2022, 12:33 PM IST

Updated : Nov 2, 2022, 12:55 PM IST

ಬೆಂಗಳೂರು: ನಿಮ್ಮ ಮನೆಯಲ್ಲಿ ಯಾರಾದರೂ ಮೃತಪಟ್ಟಿದ್ದಾರೆಯೇ ಅಥವಾ ನಿಮಗೆ ಅರೋಗ್ಯ ಸರಿಯಿಲ್ಲವೇ ಹಾಗಾದರೆ ಮಾತ್ರ ರಜೆ ತೆಗೆದುಕೊಳ್ಳಿ.‌ ಸಕಾರಣವಿಲ್ಲದೆ ರಜೆ ಕೇಳಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಆಗ್ನೇಯ ವಿಭಾಗದ ಡಿಸಿಪಿ‌ ಸಿ.ಕೆ. ಬಾಬಾ ಆದೇಶ ಹೊರಡಿಸಿದ್ದಾರೆ. ಇದು ಪೊಲೀಸ್ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ತಮ್ಮ ವ್ಯಾಪ್ತಿಯಲ್ಲಿರುವ ಲಿಪಿಕ ಸಿಬ್ಬಂದಿ, ಸಿಬ್ಬಂದಿ ಹಾಗೂ ಅಧಿಕಾರಿ‌ ಮಟ್ಟದ ಪೊಲೀಸರು ಕಾರಣವಿಲ್ಲದೆ ರಜೆ ತೆಗೆದುಕೊಳ್ಳುವಂತಿಲ್ಲ. ಸಂಬಂಧಿಗಳು ಮೃತಪಟ್ಟ ಸಂದರ್ಭದಲ್ಲಿ ಅಥವಾ ಅನಾರೋಗ್ಯಕ್ಕೆ‌ ಒಳಗಾದಾಗ ಮಾತ್ರ ರಜೆ ಪಡೆಯಬೇಕು.‌ ಅನಿವಾರ್ಯ ಕಾರಣ ಹೊರತುಪಡಿಸಿ ಪದೇ ಪದೇ ರಜೆ ಪಡೆದುಕೊಂಡರೆ ಅಂತಹವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು‌.‌ ಆಯಾ ವಿಭಾಗದ ಎಸಿಪಿ ಹಾಗೂ ಇನ್ ಸ್ಪೆಕ್ಟರ್​ಗಳು ರಜೆಗೆ ಅನುಮತಿ ನೀಡಕೂಡದು ಎಂದು ಸೂಚಿಸಲಾಗಿದೆ. ಪದೇ ಪದೇ ಕಚೇರಿಗೆ ಬಂದು ರಜೆ‌ ಬಗ್ಗೆ ಪ್ರಸ್ತಾಪಿಸಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ರಜೆ ಅನಿವಾರ್ಯ ಎಂದಾದಾಗ ತಮ್ಮ ಅನುಮತಿ‌ ಪಡೆದುಕೊಳ್ಳಬೇಕೆಂದು ಡಿಸಿಪಿ ಆದೇಶ ಹೊರಡಿಸಿದ್ದಾರೆ‌.

ಸಾಯೋ ಕಾಯಿಲೆ ಅಥವಾ ಮನೆಯಲ್ಲಿ ಯಾರಾದರು ಸತ್ತರೆ ಮಾತ್ರ ರಜೆ

ಡಿಸಿಪಿ ಆದೇಶ ಹೊರಡಿಸುತ್ತಿದ್ದಂತೆ ಕೆಳ ಹಂತದ‌‌ ಪೊಲೀಸ್ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಡಿಸಿಪಿ‌ ಸಿ.ಕೆ. ಬಾಬಾ ಕಳೆದ ತಿಂಗಳು 28ರಂದೇ ಆದೇಶ ಹೊರಡಿಸಲಾಗಿತ್ತು. ಈ‌ ಆದೇಶವು ಕೆಳಹಂತದ ಸಿಬ್ಬಂದಿಗೆ‌ ಅನ್ವಯಿಸುವುದಿಲ್ಲ ಎಂದು 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ :ಕಲಬುರಗಿಯಲ್ಲಿ ಹೀನ ಕೃತ್ಯ: ಬಹಿರ್ದೆಸೆಗೆ ತೆರಳಿದ್ದ ಬಾಲಕಿ ಎಳೆದೊಯ್ದು ಅತ್ಯಾಚಾರ, ಕೊಲೆ

Last Updated : Nov 2, 2022, 12:55 PM IST

ABOUT THE AUTHOR

...view details