ಬೆಂಗಳೂರು: ಕೋವಿಡ್ ಸೋಂಕು ದಿನೇದಿನೆ ಏರಿಕೆ ಆಗುತ್ತಿರುವ ಕಾರಣ ಸರ್ಕಾರಿ/ಅನುದಾನಿತ ಹಾಗೂ ಅನುದಾನ ರಹಿತ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸುವ ನಿರ್ಧಾರದಿಂದ ಶಿಕ್ಷಣ ಇಲಾಖೆ ಹಿಂದೆ ಸರಿದಿದೆ. ಈ ಆದೇಶಕ್ಕೆ ಇದೀಗ ಸದ್ಯ ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟ ಅಪಸ್ವರ ಎತ್ತಿದೆ.
ಶಿಕ್ಷಣ ಇಲಾಖೆ ಆದೇಶಕ್ಕೆ ಖಾಸಗಿ ಅನುದಾನಿತ ಶಾಲೆಗಳಿಂದ ಅಪಸ್ವರ - Disappointment to privately funded schools
ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನ ಕರೆದು ಶಾಲೆಯೊಳಗೆ ವಿದ್ಯಾಗಮ ಯೋಜನೆ ಹೆಸರಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಇದರಿಂದ ಮಕ್ಕಳಿಗೆ ಯಾವುದೇ ತೊಂದರೆ ಆಗಲ್ವಾ ಅಂತಾ ಪ್ರಶ್ನೆ ಮಾಡಿದ್ದಾರೆ..
ನಿರ್ಬಂಧಿತ ವಲಯ ಹೊರತುಪಡಿಸಿ 9ನೇ ತರಗತಿಯಿಂದ 12ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಶಾಲೆಯನ್ನ ಸೆಪ್ಟೆಂಬರ್ 21ರಿಂದ ತೆರೆದು ಸಂದೇಹ ಪರಿಹಾರಕ್ಕಾಗಿ ಶಾಲೆಗಳಿಗೆ ಭೇಟಿ ನೀಡಬಹುದೆಂದು ಅನುಮತಿ ನೀಡಲಾಗಿದೆ. ಆದರೆ, ಇದೀಗ ಕೋವಿಡ್ ಕಾರಣ ಕೊಟ್ಟು ಮತ್ತೆ ಆರಂಭ ಮಾಡದಂತೆ ಅನುದಾನಿತ ಶಾಲೆಗಳಿಗೆ ತಿಳಿಸಿದ್ದು, ಧೋರಣೆ ಮಾಡಿದೆ ಅಂತಾ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಆರೋಪಿಸಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನ ಕರೆದು ಶಾಲೆಯೊಳಗೆ ವಿದ್ಯಾಗಮ ಯೋಜನೆ ಹೆಸರಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಇದರಿಂದ ಮಕ್ಕಳಿಗೆ ಯಾವುದೇ ತೊಂದರೆ ಆಗಲ್ವಾ ಅಂತಾ ಪ್ರಶ್ನೆ ಮಾಡಿದ್ದಾರೆ. ಇದು ಎಲ್ಲೋ ಒಂದು ಕಡೆ ಖಾಸಗಿ ಅನುದಾನ ರಹಿತ ಶಾಲೆಗಳನ್ನ ಮುಚ್ಚಿಸಿ, ವಿದ್ಯಾಗಮ ಕಾರ್ಯಕ್ರಮದಲ್ಲಿ ಮಕ್ಕಳನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಇದನ್ನ ನಾವು ಖಂಡಿಸುತ್ತೇವೆ ಎಂದಿದ್ದಾರೆ.