ಕರ್ನಾಟಕ

karnataka

ETV Bharat / state

ಆಂಬಿಡೆಂಟ್ ಕಂಪೆನಿಯ 10.2 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿಕೊಂಡ ಇಡಿ - Ambident company

ಆಂಬಿಡೆಂಟ್ ಕಂಪೆ‌ನಿ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಜಾರಿ‌ ನಿರ್ದೇಶಾಲಯದ ಅಧಿಕಾರಿಗಳು 10.2 ಕೋಟಿ ರೂ. ಮೌಲ್ಯದ ಚಿರಾಸ್ತಿ ಹಾಗೂ ಚರಾಸ್ತಿಯನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಆಂಬಿಡೆಂಟ್ ಕಂಪೆನಿಯ 10.2 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿಕೊಂಡ ಇಡಿ
ಆಂಬಿಡೆಂಟ್ ಕಂಪೆನಿಯ 10.2 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿಕೊಂಡ ಇಡಿ

By

Published : Dec 13, 2019, 3:17 PM IST

ಬೆಂಗಳೂರು: ಉದ್ಯಾನನಗರಿ ಬೆಂಗಳೂರು ಹಾಗೂ ರಾಜ್ಯದ ವಿವಿಧ‌ ಭಾಗಗಳಲ್ಲಿದ್ದ ಆಂಬಿಡೆಂಟ್ ಕಂಪೆನಿಗೆ‌ ಸೇರಿದ 8.8 ಕೋಟಿ ಚಿರಾಸ್ತಿ ಮತ್ತು 1.4 ಕೋಟಿ ಮೌಲ್ಯದ‌ ಚರಾಸ್ತಿಯನ್ನು ಇಡಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಹಲವು ವರ್ಷಗಳ ಹಿಂದೆ ಈ ಕಂಪನಿಯವರು ಸಾರ್ವಜನಿಕರಿಂದ ಹಣವನ್ನ ಪಡೆದು ಹೆಚ್ಚಿನ ಬಡ್ಡಿ ಆಸೆ‌ ತೋರಿಸಿ ವಂಚಿಸಿದ್ದರು. ಹೂಡಿಕೆ ಮಾಡಿದ ಹಣಕ್ಕೆ ಹೆಚ್ಚುವರಿಯಾಗಿ ಶೇ.15ರಷ್ಟು ಕಮೀಷನ್ ಆಸೆ‌ ತೋರಿಸಿ ಜನರಿಗೆ ಕೋಟ್ಯಾಂತರ ರೂಪಾಯಿ ಟೋಪಿ ಹಾಕಿದ್ದರು.

ಇಡಿ ಹೊರಡಿಸಿದ ಪತ್ರಿಕಾ ಪ್ರತಿ

ಆರಂಭದಲ್ಲಿ ಕಮೀಷನ್ ನೀಡಿ ಜನರಿಂದ ಹೆಚ್ಚು ಹೆಚ್ಚು ಹಣವನ್ನ ಹೂಡಿಸಿಕೊಂಡಿದ್ದ ಕಂಪೆನಿ, ತದ ನಂತರ ಹಂತ ಹಂತವಾಗಿ ಇನ್ ವೆಸ್ಟ್ ಮಾಡಿಕೊಂಡು ಕೋಟ್ಯಾಂತರ ರೂಪಾಯಿ ವಂಚನೆ ಮಾಡಿತ್ತು. ಈ ಬಗ್ಗೆ ಸಿಸಿಬಿಯಲ್ಲಿ ಪ್ರಕರಣ ದಾಖಲಾಗಿತ್ತು.. ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿದ ಇಡಿ, ವಶಪಡಿಸಿಕೊಂಡ ಆಸ್ತಿಗಳ ಬಗ್ಗೆ ಮಾಹಿತಿ ನೀಡಿದೆ.

For All Latest Updates

ABOUT THE AUTHOR

...view details