ಬೆಂಗಳೂರು: ಸರ್ಕಾರದ ವಿರುದ್ಧವೇ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದ ಅಧಿಕಾರಿಯನ್ನ ಎತ್ತಂಗಡಿ ಮಾಡಲಾಗಿದೆ. ಸರ್ಕಾರದ ಅಧಿಕಾರಿಯಾಗಿ ನಿಯಮಗಳ ಉಲ್ಲಂಘನೆ ಮಾಡಿದ ಹಾಗೂ ಸರ್ಕಾರದ ವಿರುದ್ಧವೇ ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ ಆರೋಪದ ಮೇಲೆ ಪ್ರಾದೇಶಿಕ ಆಂಗ್ಲ ಕೇಂದ್ರದ ನಿರ್ದೇಶಕರನ್ನು ಶಿಕ್ಷಣ ಇಲಾಖೆ ನಿರ್ದೇಶಕ ಸ್ಥಾನದಿಂದ ಎತ್ತಂಗಡಿ ಮಾಡಲಾಗಿದೆ.
ನಿರ್ದೇಶಕರಾಗಿದ್ದ ಡಾ.ಬಿ.ಕೆ.ಎಸ್.ವರ್ಧನ್ ಅವರೇ ಎತ್ತಂಗಡಿ ಆದ ಅಧಿಕಾರಿ. ಇವರು ಇತ್ತೀಚೆಗೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ 'ನರೇಂದ್ರ ಮೋದಿಜಿ ಅವರಿಗೆ ದೇಶದ ಅಸ್ಪೃಶ್ಯ ಜನ ಸಮುದಾಯಗಳ ಪರವಾಗಿ ಜನ್ಮ ದಿನದ ಶುಭಾಶಯಗಳು. ಇನ್ನೊಂದು ಸಲ ನೀವು ಪ್ರಧಾನ ಮಂತ್ರಿಯಾದರೆ, ಕಾಶಿ ವಿಶ್ವನಾಥನ ಆಣೆಯಾಗಿ ಸಾಮಾಜಿಕ ನ್ಯಾಯ ಪಾಲನೆ ಮಾಡಲು ಪ್ರಾಮಾಣಿಕವಾಗಿ ಮನಸು ಮಾಡಿ, ಕನಿಷ್ಠ ಅಂತಹ ಶಿಕ್ಷಣ ಸಚಿವರನ್ನಾಗಿ ಮಾಡಿ. ನಾನೂ ವಿವರವಾದ ಮನವಿ ಪತ್ರ ಬರೆಯುವೆ' ಎಂದು ಸ್ಟೇಟಸ್ ಹಾಕಿದ್ದರು.