ಬೆಂಗಳೂರು: ಕನ್ನಡ ಚಿತ್ರರಂಗ, ರಂಗಭೂಮಿ, ಕಿರುತೆರೆ ಕ್ಷೇತ್ರಗಳಲ್ಲಿ ಪ್ರಸಿದ್ದಿ ಪಡೆದಿರುವ ‘ಆ ದಿನಗಳು’ ನಿರ್ದೇಶಕ ಕೆ.ಎಂ ಚೈತನ್ಯ (ರಾಷ್ಟ್ರ ಕವಿ ಜಿ ಎಸ್ ಶಿವರುದ್ರಪ್ಪ ಅವರ ಮೊಮ್ಮಗ) ಇದೀಗ ಫೈರ್ ವರ್ಕ್ ಇಂಡಿಯಾ ಸಂಸ್ಥೆಯ ಮೂರು ಆಂಗ್ಲ ಕಿರು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ನಿರ್ದೇಶನ ಮಾಡಲು ಮುಂದಾಗಿದ್ದಾರೆ.
ಸಮಾಜದಲ್ಲಿ ಈಗ ಗಟ್ಟಿಯಾಗಿ ಬೇಕಾಗಿರುವ ಮಾನವ ಸಂಬಂಧದ ಬಗ್ಗೆ 30 ಸೆಕೆಂಡ್ಗಳ ವಿಡಿಯೋ ಇದಾಗಿರುತ್ತದೆ. ಐಒಎಸ್ ಹಾಗೂ ಆನ್ಡ್ರಾಯಿಡ್ ಮೊಬೈಲ್ ಫೋನ್ಲ್ಲಿ ಇದು ಲಭ್ಯವಿರುತ್ತದೆ. ಸಧ್ಯಕ್ಕೆ ಕೆ.ಎಂ ಚೈತನ್ಯ ಅವರ ಮೂರು ಕಿರು ಚಿತ್ರಗಳು ಫೈರ್ ವರ್ಕ್ ಸಂಸ್ಥೆಗೆ ತಲುಪಿಸಿದ್ದಾರೆ. ಫೈರ್ ವರ್ಕ್ಸ್ ಸಂಸ್ಥೆ ಸ್ಪೂರ್ತಿದಾಯಕ, ಸಾಧನೆ, ನಿರಂತರತೆ ಬಗ್ಗೆ ಕಥಾ ವಸ್ತುಗಳನ್ನು ಹೇಳಲು ಹೊರಟಿದ್ದಾರೆ.