ಕರ್ನಾಟಕ

karnataka

By

Published : Mar 4, 2021, 8:41 PM IST

ETV Bharat / state

2021ನೇ ಸಾಲಿನ ಸಾಮಾನ್ಯ ವರ್ಗಾವಣೆವರೆಗೆ ಯಾವುದೇ ವರ್ಗಾವಣೆ ಮಾಡದಂತೆ ನಿರ್ದೇಶನ

ಟಿಪ್ಪಣಿ ಹೊರಡಿಸಿರುವ ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ರಮಣ ರೆಡ್ಡಿ, 2021ನೇ ಸಾಲಿನ ಸಾಮಾನ್ಯ ವರ್ಗಾವಣೆವರೆಗೆ ಬೇರೆ ಯಾವುದೇ ವರ್ಗಾವಣೆ ಮಾಡಬಾರದೆಂದು ನಿರ್ದೇಶಿಸಿದ್ದಾರೆ.

ಟಿಪ್ಪಣಿ ಹೊರಡಿಸಿರುವ ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ
ಟಿಪ್ಪಣಿ ಹೊರಡಿಸಿರುವ ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ

ಬೆಂಗಳೂರು:ಆಡಳಿತಾತ್ಮಕವಾಗಿ ಅವಶ್ಯವಿರುವ ಖಾಲಿ ಸ್ಥಾನಗಳನ್ನು ತುಂಬುವುದು ಹೊರತಾಗಿ, ಬೇರೆ ಯಾವುದೇ ವರ್ಗಾವಣೆಗಳನ್ನು 2021ನೇ ಸಾಲಿನ ಸಾಮಾನ್ಯ ವರ್ಗಾವಣೆವರೆಗೆ ಮಾಡದಿರಲು ಸರ್ಕಾರ ನಿರ್ಧರಿಸಿದೆ.

ಟಿಪ್ಪಣಿ ಹೊರಡಿಸಿರುವ ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ

ಈ ಸಂಬಂಧ ಟಿಪ್ಪಣಿ ಹೊರಡಿಸಿರುವ ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ರಮಣ ರೆಡ್ಡಿ, ಅಂತಹ ವರ್ಗಾವಣೆಗಳನ್ನು ಕೂಡ ಇಲಾಖೆ ಮಟ್ಟದಲ್ಲಿ ಮಾಡದೇ, ಪ್ರತಿಯೊಂದು ವರ್ಗಾವಣೆಗೂ ಮುಖ್ಯಮಂತ್ರಿಯವರಿಗೆ ಕಡತದಲ್ಲಿ ಸಲ್ಲಿಸಿ, ಆದೇಶ ಪಡೆದ ನಂತರವೇ ಮಾಡುವಂತೆ ನಿರ್ದೇಶನ ನೀಡಲಾಗಿದೆ.

ಈಗಾಗಲೇ ಇಲಾಖೆಗಳಲ್ಲಿ ಕಡತದ ಟಿಪ್ಪಣಿ, ನಡವಳಿ, ಸ್ವೀಕೃತಿ ಮೇಲಿನ ಷರಾ ರೂಪದಲ್ಲಿ ಸಿಎಂರಿಂದ ಸ್ವೀಕೃತವಾದ ವರ್ಗಾವಣೆ ಆದೇಶಗಳನ್ನು ಸಹ ಕಡತದಲ್ಲಿ ಸಲ್ಲಿಸಬೇಕು.ನಂತರ ಮುಖ್ಯಮಂತ್ರಿಯವರ ಆದೇಶವನ್ನು ಕಡತದಲ್ಲಿ ಪಡೆದು, ಬಳಿಕ ಜಾರಿಗೊಳಿಸಬೇಕು ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿಂದು 571 ಮಂದಿಗೆ ಕೊರೊನಾ ಸೋಂಕು: 4 ಜನ ಬಲಿ

ಈ ಸೂಚನೆಗಳನ್ನು ಪಾಲಿಸದೇ ಜಾರಿಗೊಳಿಸಿದ ವರ್ಗಾವಣೆಗಳ ಬಗ್ಗೆ ಸಂಬಂಧಪಟ್ಟ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳೇ ಜವಾಬ್ದಾರರಾಗುತ್ತಾರೆ ಎಂದು ತಿಳಿಸಲಾಗಿದೆ.

ABOUT THE AUTHOR

...view details