ಬೆಂಗಳೂರು: ಜಾತಿ ರಾಜಕಾರಣ, ಪಕ್ಷ ವಿರೋಧಿಗಳ ಮೇಲೆ ಕ್ರಮ ಕೈಗೊಳ್ಳಬೇಕೇ ಹೊರತು ನಿರಾಪರಾಧಿಗಳ ಮೇಲೆ ಕ್ರಮ ಕೈಗೊಳ್ಳಬಾರದು ಎಂದು ಯಡಿಯೂರಪ್ಪ ಬದಲಾವಣೆಗೆ ಬಾಲೆಹೊಸೂರಿನ ದಿಂಗಾಲೇಶ್ವರ ಶ್ರೀಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮುಖ್ಯಮಂತ್ರಿ ಯಡಿಯೂರಪ್ಪಗೆ ಮಠಾಧೀಶರ ಸಂಪೂರ್ಣ ಬೆಂಬಲ ಇದೆ ಎಂದು ಘೋಷಿಸಿದ್ದಾರೆ.
ಅರಮನೆ ಮೈದಾನದಲ್ಲಿ ಮಠಾಧೀಶರ ಸಮಾವೇಶದಲ್ಲಿ ಮಾತನಾಡಿದ ಶ್ರೀಗಳು, ಯಡಿಯೂರಪ್ಪ ಹಾಗೂ ಮಕ್ಕಳು ಮಠಾಧೀಶರ ಸಮಾವೇಶ ಆಯೋಜನೆ ಮಾಡಲು ಕಾರಣ ಎಂಬ ಮಾತು ಕೇಳಿ ಬಂದಿದೆ. ದೇವರ ಸಾಕ್ಷಿಯಾಗಿ ಯಡಿಯೂರಪ್ಪ ಇಂತಹ ಹೋರಾಟ ಮಾಡಬೇಡಿ ಎಂದು ಹೇಳಿದ್ದಾರೆ. ಇದು ನಮ್ಮ ವೈಯಕ್ತಿಕ ನಿಲುವು. ಈ ಸಮಾವೇಶಕ್ಕೂ ಯಡಿಯೂರಪ್ಪ ಕುಟುಂಬ, ಬಿಜೆಪಿ ನಾಯಕರಿಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸ್ವಪಕ್ಷದವರು ಬಹಳಷ್ಟು ವಿರೋಧ ಮಾಡುತ್ತಾ ಬಂದರು. ಆ ವಿರೋಧವನ್ನ ಹೈಕಮಾಂಡ್ ನಿಯಂತ್ರಿಸಬೇಕಿತ್ತು. ಜಾತಿ, ಪಕ್ಷ ವಿರೋಧಿಗಳ ಮೇಲೆ ಕ್ರಮ ಕೈಗೊಳ್ಳಬೇಕೇ ಹೊರತು ನಿರಾಪರಾಧಿಗಳ ಮೇಲೆ ಕ್ರಮಕೈಗೊಳ್ಳಬಾರದು ಎಂದು ಯಡಿಯೂರಪ್ಪ ಬದಲಾವಣೆಗೆ ಸ್ವಾಮೀಜಿ ಆಕ್ಷೇಪ ವ್ಯಕ್ತಪಡಿಸಿದರು.
ವರ್ತಮಾನದ ಸಮಸ್ಯೆಯಲ್ಲಿ ಇದು ಈಗೀನ ರಾಜಕೀಯವೂ ಹೌದು. ಯಡಿಯೂರಪ್ಪ ಅವರನ್ನ ಈ ವೇದಿಕೆ ಅಭಿನಂದಿಸುತ್ತದೆ. ಎಲ್ಲಾ ಜನಾಂಗದವರಿಗೆ ಬಜೆಟ್ನಲ್ಲಿ ಅನುದಾನ ನೀಡಿರುವುದರಿಂದ ಅವರನ್ನ ಅಭಿನಂದಿಸಬೇಕು. ಈ ಸಮಾವೇಶ ಯಾವ ಪಕ್ಷದ ಪರವಾಗಿಯೂ ಇಲ್ಲ. ಯಾವ ಪಕ್ಷದ ವಿರೋಧವಾಗಿಯೂ ಇಲ್ಲ ಎಂದು ಸ್ವಾಮೀಜಿ ಹೇಳಿದ್ರು.
ಯಾವ ಕಾರಣಕ್ಕಾಗಿ ರಾಜ್ಯದಲ್ಲಿ ಇಷೆಲ್ಲಾ ಆಯ್ತು ಎನ್ನುವುದನ್ನು ಮಾಧ್ಯಮಗಳು ತೋರಿಸಿವೆ. ನಾಯಕತ್ವ ಬದಲಾವಣೆ ಅಗಲಿದೆ. ಮುಂದಿನ ಸರ್ಕಾರದಲ್ಲಿ ಯಡಿಯೂರಪ್ಪ ಅವರಿಗೆ ಅವಕಾಶವಿಲ್ಲ. ಈಶ್ವರಪ್ಪ, ಜಗದೀಶ್ ಶೆಟ್ಟರ್ಗೆ ಅವಕಾಶ ಇಲ್ಲ. ನಮ್ಮದೇ ಇನ್ಮುಂದೆ ಎಲ್ಲಾ ನಡೆಯೋದು ಅಂದರೆ ಹೇಗೆ? ಅವಕಾಶ ಇಲ್ಲ ಎನ್ನುವುದನ್ನು ಒಪ್ಪುತ್ತೇವೆ. ಆದರೆ ನಮ್ಮದೇ ಇನ್ಮುಂದೆ ನಡೆಯೋದು ಅನ್ನೋದನ್ನು ಸಹಿಸಲ್ಲ ಎಂದು ಪರೋಕ್ಷವಾಗಿ ಕಟೀಲ್ ವಿರುದ್ಧ ಕಿಡಿಕಾರಿದರು.
ಕೇಂದ್ರ ನಾಯಕರಿಗೆ ಸಂದೇಶ ತಲುಪಿಸಲು ಹಿಂದಿಯಲ್ಲಿ ಕೆಲ ಮಾತುಗಳನ್ನಾಡಿದ ದಿಂಗಾಲೇಶ್ವರ ಶ್ರೀಗಳು, ನಾವೂ ಯಾರ ಪರವೂ ಇಲ್ಲ, ಯಾರ ವಿರುದ್ಧವೂ ಇಲ್ಲ. ಕೇಂದ್ರ ಸರ್ಕಾರ ಹಾಗೂ ಹೈಕಮಾಂಡ್ ವಿರುದ್ಧ ನಾವೂ ಈ ಸಮಾವೇಶ ಮಾಡಿಲ್ಲ. ಜತೆಗೆ ಮಠಾಧೀಶರು ಶಕ್ತಿ ಪ್ರದರ್ಶನಕ್ಕೆ ಬಂದಿಲ್ಲ ಎಂದು ಪುನಚ್ಚರಿಸಿದ್ದರು.
ಮಠಾಧಿಪತಿಗಳು ಆಳುವ ಅರಸರಿಗೆ ಮಾರ್ಗದರ್ಶನ ಮಾಡುತ್ತಾ ಬಂದಿದ್ದಾರೆ. ಈ ಪಕ್ಷಗಳು ಹುಟ್ಟುವ ಮುನ್ನ ಮಠಗಳು ಸಾವಿರ ವರ್ಷಗಳ ಹಿಂದೆಯೇ ಹುಟ್ಟಿ ಕೆಲಸ ಮಾಡಿವೆ ಎಂದು ಮಠಗಳನ್ನು ಪಕ್ಷಗಳಿಗೆ ಬೆಂಬಲಿಸುವ ಹೇಳಿಕೆ ನೀಡುತ್ತಿರುವ ರಾಜಕಾರಣಿಗಳಿಗೆ ತಿರುಗೇಟು ನೀಡಿದರು.
ಗೆದ್ದಲು ಕಟ್ಟಿದ ಹುತ್ತದಲ್ಲಿ ಹಾವು ವಾಸ ಮಾಡಿದಂತೆ:
ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ ಎಂಬ ಸುದ್ದಿ ಹರಿಬಿಟ್ಟರು. ಹಿಂದಿನ ವರ್ಷ ನೆರೆ ಸಂಬಂಧಿಸಿದಾಗ 45 ದಿನ ಯಡಿಯೂರಪ್ಪ ಅವರು ಒಬ್ಬರೇ ಕೆಲಸ ಮಾಡಿದರು. ಬಂದಾಳಿಕೆ ಮರದಲ್ಲಿ ಬಿಟ್ಟರೆ ಮರವನ್ನೇ ನಾಳ ಮಾಡುತ್ತದೆ. ಬಿಜೆಪಿಯಲ್ಲಿ ಹುಟ್ಟಿ ಬಿಜೆಪಿಯನ್ನೇ ತೆಗೆಯಲು ಹೋಗುತ್ತಾರೆ. ಆಗ ನಾವು ಬಂದಾಳಿಕೆಯನ್ನ ತೆಗೆದು ಹಾಕಬೇಕು. ಈಶ್ವರಪ್ಪ, ಜಗದೀಶ್, ಸಿ ಟಿ ರವಿ, ಯತ್ನಾಳ್ ನಂತಹ ಅಗ್ರಗಣ್ಯರಿದ್ದಾರೆ. ನಾಯಕರಿಲ್ಲ ಎಂದಲ್ಲ. ಯಡಿಯೂರಪ್ಪ ಸುದೀರ್ಘ ಕಾಲ ಕೆಲಸ ಮಾಡಿದ್ದಾರೆ. ಕೆಲ ನಾಯಕರು ಬೇರೆ ನಾಯಕರನ್ನ ತೇಜೊವಧೆ ಮಾಡುವುದು ಸಲ್ಲದು.