ಕರ್ನಾಟಕ

karnataka

ETV Bharat / state

ಪ್ರವಾಹಪೀಡಿತ ಉತ್ತರ ಕರ್ನಾಟಕದತ್ತ ಸರ್ಕಾರ ಗಮನ ಹರಿಸಲಿ: ದಿನೇಶ್ ಗುಂಡೂರಾವ್

ಈ ಬಾರಿಯೂ ಅತೀವೃಷ್ಟಿಯಿಂದ ಪ್ರವಾಹಕ್ಕೆ ಸಿಲುಕಿರುವ ಉತ್ತರ ಕರ್ನಾಟಕ ಜನರ ನೆರವಿಗೆ ಸರ್ಕಾರ ಕೂಡಲೇ ಧಾವಿಸಬೇಕೆಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.

dinesh gundurao
ದಿನೇಶ್ ಗುಂಡೂರಾವ್ ಟ್ವೀಟ್​

By

Published : Aug 17, 2020, 10:30 PM IST

ಬೆಂಗಳೂರು: ಪ್ರವಾಹದಿಂದಾಗಿ ಉತ್ತರ ಕರ್ನಾಟದ ವಿವಿಧ ಜಿಲ್ಲೆಯ ಜನ ತತ್ತರಿಸಿದ್ದು, ಕೂಡಲೇ ಸರ್ಕಾರ ಇತ್ತ ಗಮನ ಹರಿಸಬೇಕೆಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದಾರೆ.

ದಿನೇಶ್ ಗುಂಡೂರಾವ್ ಟ್ವೀಟ್​

ಈ ಕುರಿತು ಟ್ವೀಟ್ ಮಾಡಿರುವ ಅವರು, ಬೆಳಗಾವಿ, ವಿಜಯಪುರ, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳು ಪ್ರವಾಹಕ್ಕೆ ಸಿಲುಕೊಂಡಿವೆ. ಜನ-ಜಾನುವಾರುಗಳು ಸಂಕಷ್ಟದಲ್ಲಿ ಸಿಲುಕಿಕೊಂಡಿವೆ. ಲಕ್ಷಾಂತರ ಮೌಲ್ಯದ ಬೆಳೆ ನಾಶವಾಗಿದೆ. ಗ್ರಾಮಗಳು ಪ್ರವಾಹದಿಂದಾಗಿ ನಡುಗಡ್ಡೆಯಾಗಿವೆ. ಸರ್ಕಾರ ಸಂತ್ರಸ್ತರ ನೆರವಿಗೆ ಕೂಡಲೇ ಧಾವಿಸಲಿ, ಚುರುಕಾಗಿ ಸ್ಪಂದಿಸಲಿ ಎಂದಿದ್ದಾರೆ.

ದಿನೇಶ್ ಗುಂಡೂರಾವ್ ಟ್ವೀಟ್​


ಕಳೆದ ವರ್ಷದ ಪ್ರವಾಹ ಸಂತ್ರಸ್ತರಿಗೆ ಸರ್ಕಾರ ಇನ್ನೂ ಪರಿಹಾರ ಕೊಟ್ಟಿಲ್ಲ, ಅದು ಕಾಗದದ ಮೇಲಿನ ಭರವಸೆಯಾಗಿಯೇ ಉಳಿದಿದೆ. ಎ,ಬಿ,ಸಿ ಕೆಟಗರಿ ಮಾಡುವ ಮೂಲಕ ಪರಿಹಾರ ನೀಡಲು ಸರ್ಕಾರ ಸತಾಯಿಸುತ್ತಿದೆ. ಹೀಗಿರುವಾಗಲೇ ಮತ್ತೆ ಉತ್ತರ ಕರ್ನಾಟಕದ ಜಿಲ್ಲೆಗಳು ಸಂಕಷ್ಟಕ್ಕೆ ಸಿಲುಕಿವೆ. ಬಾಯಿ ಮಾತಿನ ಭರವಸೆ ನೀಡುವುದನ್ನು ಬಿಟ್ಟು ನೆರೆ ಸಂತ್ರಸ್ತರ ನೆರವಿಗೆ ಧಾವಿಸಲಿ ಎಂದು ಸಲಹೆ ಇತ್ತಿದ್ದಾರೆ.
ಕೇಂದ್ರದ ವಿರುದ್ಧ ಬೇಸರ:
ಕೇಂದ್ರ ಸರ್ಕಾರ ಸಿಬಿಐ, ಇಡಿ, ಐಟಿ ಇಲಾಖೆಗಳಂತ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡ ನಂತರ ಮುಂದೇನು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈಗ ಬಿಜೆಪಿ ಮತ್ತು ಆರ್​ಎಸ್​​ಎಸ್​​​ನ ಕೆಟ್ಟ ಕಣ್ಣು ಫೇಸ್ಬುಕ್ ಮತ್ತು ವಾಟ್ಸ್ಆ್ಯಪ್ ನಂತಹ ಸಾಮಾಜಿಕ ಜಾಲತಾಣದ ಮೇಲೂ ಬಿದ್ದಿದೆ. ಪ್ರಜಾಪ್ರಭುತ್ವಕ್ಕೆ ಇನ್ನೆಲ್ಲಿಯ ಉಳಿಗಾಲ? ಎಂದು ಅಭಿಪ್ರಾಯ ಪಟ್ಟಿದ್ದಾರೆ.

ABOUT THE AUTHOR

...view details