ಬೆಂಗಳೂರು: ರಾಜ್ಯದ ಹಿತದೃಷ್ಟಿಯಿಂದ ವಿಪಕ್ಷವಾಗಿ ಸರ್ಕಾರಕ್ಕೆ ನಾವು ಎಲ್ಲಾ ರೀತಿಯ ಸಹಕಾರ ಕೊಡ್ತೀವಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ರು.
ವಿಪಕ್ಷವಾಗಿ ಸರ್ಕಾರಕ್ಕೆ ಸಹಕಾರ ಕೊಡ್ತೀವಿ: ದಿನೇಶ್ ಗುಂಡೂರಾವ್ - ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್
ನೂತನ ಸಂಪುಟ ಸದಸ್ಯರನ್ನು ದಿನೇಶ್ ಗುಂಡೂರಾವ್ ಅಭಿನಂದಿಸಿದ್ದು, ರಾಜ್ಯದ ಹಿತದೃಷ್ಟಿಯಿಂದ ವಿಪಕ್ಷವಾಗಿ ಸರ್ಕಾರಕ್ಕೆ ಸಕಲ ರೀತಿಯ ಸಹಕಾರ ಕೊಡ್ತೀವಿ ಎಂದರು.
![ವಿಪಕ್ಷವಾಗಿ ಸರ್ಕಾರಕ್ಕೆ ಸಹಕಾರ ಕೊಡ್ತೀವಿ: ದಿನೇಶ್ ಗುಂಡೂರಾವ್](https://etvbharatimages.akamaized.net/etvbharat/prod-images/768-512-4189121-thumbnail-3x2-sanju.jpg)
ಅಂಬೇಡ್ಕರ್ ಭವನದಲ್ಲಿ ನಡೆದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ದೇವರಾಜ ಅರಸು ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದರು.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು,ಸಂಪುಟ ವಿಸ್ತರಣೆ ಏಕಿಷ್ಟು ತಡ ಮಾಡಿದ್ರು ಅನ್ನೋದು ಗೊತ್ತಿಲ್ಲ. ಅತೃಪ್ತರನ್ನು ತೃಪ್ತಿಪಡಿಸುವ ಕೆಲಸ ಬಿಜೆಪಿಗೆ ಆಗ್ತಿಲ್ಲ ಅಂತ ಕಾಣುತ್ತಿದೆ. ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಖಾತೆ ಹಂಚಿಕೆ ಸರಿಯಾಗಿ ನಡೆದಿಲ್ಲ. ಅಲ್ಲದೇ ಹಲವು ಜಿಲ್ಲೆಗೆ ಪ್ರಾತಿನಿಧ್ಯವೂ ಸಿಕ್ಕಿಲ್ಲ. ಆದ್ರೆ ಬಿಜೆಪಿ ತೀರ್ಮಾನಗಳ ಬಗ್ಗೆ ನಾನು ಹೆಚ್ಚು ಪ್ರತಿಕ್ರಿಯೆ ನೀಡಲ್ಲ. ಸರ್ಕಾರ ಉತ್ತಮವಾಗಿ ಜನಪರವಾಗಿ ಕೆಲಸ ಮಾಡಲಿ ಎಂದು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಕಿವಿಮಾತು ಹೇಳಿದ್ರು.