ಕರ್ನಾಟಕ

karnataka

ETV Bharat / state

ದಿನೇಶ್ ಗುಂಡೂರಾವ್​ಗೆ ಮಾತೃ ವಿಯೋಗ: ವರಲಕ್ಷ್ಮಿ ಗುಂಡೂರಾವ್ ಇನ್ನಿಲ್ಲ - varalakshmi gundurao died news

ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಪತ್ನಿ ವರಲಕ್ಷ್ಮಿ ಗುಂಡೂರಾವ್ ಮಂಗಳವಾರ ರಾತ್ರಿ ನಿಧನರಾಗಿದ್ದು, ಅವರ ಅಂತ್ಯಕ್ರಿಯೆ ಇಂದು ಸಂಜೆ 4 ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣ ಸಮೀಪ ಇರುವ ಸಾದಹಳ್ಳಿ ಗೇಟ್ ಬಳಿ ನೆರವೇರಲಿದೆ.

banglore
ವರಲಕ್ಷ್ಮಿ ಗುಂಡೂರಾವ್ ನಿಧನ

By

Published : Jan 6, 2021, 9:16 AM IST

Updated : Jan 6, 2021, 9:37 AM IST

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಪತ್ನಿ ವರಲಕ್ಷ್ಮಿ ಗುಂಡೂರಾವ್ (72) ನಿಧನರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೋವಿಡ್ -19ಕ್ಕೆ ತುತ್ತಾಗಿದ್ದ ವರಲಕ್ಷ್ಮಿ ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ ನಿಧನರಾಗಿದ್ದಾರೆ.

ಮೃತರ ಅಂತ್ಯಕ್ರಿಯೆ ಇಂದು ಸಂಜೆ 4 ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣ ಸಮೀಪ ಇರುವ ಸಾದಹಳ್ಳಿ ಗೇಟ್ ಬಳಿ ನೆರವೇರಲಿದೆ. 1993 ರಲ್ಲಿ ತಮ್ಮ 57 ನೇ ವಯಸ್ಸಿನಲ್ಲಿ ಆರ್. ಗುಂಡೂರಾವ್ ಕ್ಯಾನ್ಸರ್​​ನಿಂದಾಗಿ ಮೃತಪಟ್ಟರು. ಈ ಸಂದರ್ಭ ವರಲಕ್ಷ್ಮಿ ಅವರು ರಾಜಕೀಯ ರಂಗಕ್ಕೆ ಇಳಿದಿದ್ದರು. ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಸೋಲನುಭವಿಸಿದ್ದರು.

ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಪತ್ನಿ ವರಲಕ್ಷ್ಮಿ ಗುಂಡೂರಾವ್ ನಿಧನ

ನಂತರದ ದಿನಗಳಲ್ಲಿ ರಾಜಕೀಯದಿಂದ ದೂರವಾಗಿದ್ದ ಅವರು ತಮ್ಮ ಪುತ್ರ ದಿನೇಶ್ ಗುಂಡೂರಾವ್ ಅವರನ್ನು ರಾಜಕೀಯ ರಂಗಕ್ಕೆ ಪರಿಚಯಿಸಿದ್ದರು. ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷರಾಗಿ ರಾಜ್ಯ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದು, ಇದೀಗ ತಮಿಳುನಾಡು ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.

ಮೃತರು ಪುತ್ರರಾದ ದಿನೇಶ್ ಗುಂಡೂರಾವ್ ಹಾಗೂ ಮಹೇಶ್ ಗುಂಡೂರಾವ್ ಅವರನ್ನು ಅಗಲಿದ್ದಾರೆ. ಮೂರು ಗಂಡು ಮಕ್ಕಳ ಪೈಕಿ ರಾಜೇಶ್ ಗುಂಡೂರಾವ್ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದರು.

Last Updated : Jan 6, 2021, 9:37 AM IST

ABOUT THE AUTHOR

...view details