ಬೆಂಗಳೂರು:ಗಾಂಧಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗುಂಡೂರಾವ್ ಅವರು ಕೇವಲ 105 ಮತಗಳ ಅಂತರದಲ್ಲಿ ಗೆಲುವನ್ನು ಸಾಧಿಸಿದ್ದಾರೆ. ಮರು ಮತ ಎಣಿಕೆಗೆ ಒಪ್ಪದ ಚುನಾವಣಾಧಿಕಾರಿಗಳು ದಿನೇಶ್ ಗುಂಡೂರಾವ್ ಗೆಲುವೆಂದು ಘೋಷಣೆ ಮಾಡಿದ್ದಾರೆ.
ಮೊದಲು 900 ಮತಗಳ ಅಂತರ ಎಂದು ಘೋಷಿಸಿದ್ದ ಚುನಾವಣಾ ಅಧಿಕಾರಿಗಳು. ಬಳಿಕ ಸಪ್ತಗಿರಿಗೌಡರಿಂದ ಪೋಸ್ಟಲ್ ವೋಟ್ ಹಾಗೂ ಇವಿಎಂಗಳನ್ನು ಸೇರಿ, ಮರು ಏಣಿಕೆಗೆ ಅವಕಾಶ ನೀಡಬೇಕೆಂದು ಅಧಿಕಾರಿಗಳಿಗೆ ಮನವಿ ಮಾಡಿದ್ದರು. ನಂತರ ಚುನಾವಣಾಧಿಕಾರಿಗಳು ಸಪ್ತಗಿರಿಗೌಡ ಹಾಗೂ ದಿನೇಶ್ ಗುಂಡೂರಾವ್ ಇಬ್ಬರನ್ನು ಕರೆಸಿ ಮಾತುಕತೆ ನಡೆಸಿ, ನಿಯಮ ತಿಳಿಸಿದ ಅಧಿಕಾರಿಗಳು, ಅಸಿಂಧುವಾದ ಮತಗಳಿಂದ ಕಡಿಮೆ ಅಂತರದಿಂದ ಗೆಲುವು ಸಾಧಿಸಿದರೆ ಮಾತ್ರ ಮರು ಏಣಿಕೆಗೆ ಅವಕಾಶ, 76 ಅನರ್ಹ (ಇನ್ ವ್ಯಾಲಿಡ್ ವೋಟ್) ಮತಗಳು ಇವೆ ಇದನ್ನು ಸೇರಿಸಿದರು ಗೆಲುವು ಆಗಲ್ಲ, ಇದರಿಂದ ನಿಯಮ ಪ್ರಕಾರ ಮತ್ತೊಮ್ಮೆ ಮರು ಎಣಿಕೆ ಸಾಧ್ಯವಿಲ್ಲ ಎಂದು ಹೇಳಿ ಮರು ಮತ ಏಣಿಕೆ ತಿರಸ್ಕರಿಸಿ. 105 ಮತಗಳಿಂದ ದಿನೇಶ್ ಗುಂಡೂರಾವ್ ಗೆಲುವು ಎಂದು ಅಧಿಕಾರಿಗಳು ಘೋಷಣೆ ಮಾಡಿದರು.