ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರಿಗೆ ವೇತನ ನೀಡದಿರುವುದು ಸರ್ಕಾರದ ಆಡಳಿತ ವೈಫಲ್ಯ ತೋರಿಸುತ್ತದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟಿದ್ದಾರೆ.
ಟ್ವೀಟ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಕೆಎಸ್ಆರ್ಟಿಸಿಯ 4 ನಿಗಮಗಳ ನೌಕರರಿಗೆ ವೇತನ ಕೊಡದಿರುವುದು ಸಾರಿಗೆ ಇಲಾಖೆ ಮತ್ತು ಸರ್ಕಾರದ ಆಡಳಿತ ವೈಫಲ್ಯದ ಕೈಗನ್ನಡಿ ಎಂದು ಟೀಕಿಸಿದ್ದಾರೆ.
ಸ್ವತಃ ಉಪಮುಖ್ಯಮಂತ್ರಿ ಕೈಯಲ್ಲೇ ಸಾರಿಗೆ ಇಲಾಖೆಯಿದ್ದರೂ ಸುಮಾರು 1.35 ಲಕ್ಷ ನೌಕರರಿಗೆ ಸಂಬಳ ಆಗಿಲ್ಲ. ಸಂಬಳ ಇಲ್ಲದೆ ದೀಪಾವಳಿಯಂತಹ ಸಡಗರದ ಹಬ್ಬವನ್ನೂ ಸಾರಿಗೆ ನೌಕರರು ಆಚರಿಸದಂತಾಗಿದೆ. ಸರ್ಕಾರ ಈ ಕೂಡಲೇ ಗಮನ ಹರಿಸಬೇಕು. ಸಾರಿಗೆ ನೌಕರರ ಸಂಬಳ ಆಗದಿರುವದಕ್ಕೆ ಸಚಿವ ಸವದಿ ಕೋವಿಡ್ ನೆಪ ಹೇಳಿದ್ದಾರೆ. ಆದ್ರೆ ಕೋವಿಡ್ ಬಿಸಿ ಕೇವಲ ಸಾರಿಗೆ ಇಲಾಖೆಗೆ ಮಾತ್ರ ತಟ್ಟಿಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.