ಬೆಂಗಳೂರು: ಖಾಸಗಿ ಶಾಲೆಗಳ ಧಿಮಾಕಿನ ಮಾತಿನ ಹಿಂದೆ ರಾಜ್ಯ ಸರ್ಕಾರದ ಆಡಳಿತ ವೈಫಲ್ಯವಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.
ಟ್ವೀಟ್ ಮೂಲಕ ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಸಚಿವರ ವಿರುದ್ಧ ಆಕ್ರೋಶ ಹೊರಹಾಕಿರುವ ಅವರು, 'ಸಚಿವರೆ, ನಮ್ಮದು ಗುರುಕುಲ ಪರಂಪರೆ. ಶಿಕ್ಷಣ ವ್ಯವಹಾರವಲ್ಲ ಅದು ಸೇವೆ. ಖಾಸಗಿ ಸಂಸ್ಥೆಗಳು ಶುಲ್ಕ ಕಟ್ಟದೆ ಇದ್ದರೆ ಆನ್‌ಲೈನ್ ತರಗತಿ ನಡೆಸುವುದಿಲ್ಲ ಎಂಬ ಧಿಮಾಕಿನ ಮಾತನಾಡುತ್ತಿವೆ ಎಂದರೆ, ನಿಮ್ಮ ಆಡಳಿತ ವೈಫಲ್ಯ ತೋರಿಸುತ್ತಿದೆ. ಕೋವಿಡ್‌ನ ಸಂಕಷ್ಟ ಕಾಲದಲ್ಲಿ ಶುಲ್ಕ ಮುಖ್ಯವೋ, ಶಿಕ್ಷಣ ಮುಖ್ಯವೋ ನಿರ್ಧರಿಸಿ' ಎಂದಿದ್ದಾರೆ.