ಕರ್ನಾಟಕ

karnataka

ETV Bharat / state

ಹೆಚ್.ವಿಶ್ವನಾಥ್- ಸಾ ರಾ ಮಹೇಶ್ ನಡುವೆ ಆಣೆ ಪ್ರಮಾಣ.. ದಿನೇಶ್‌ ಗುಂಡೂರಾವ್ ಕಿವಿಮಾತು - ತಾಯಿ ಚಾಮುಂಡೇಶ್ವರಿ ಮುಂದೆ ಆಣೆ ಪ್ರಮಾಣ

ಹುಣಸೂರು ಅನರ್ಹ ಶಾಸಕ ಹೆಚ್.ವಿಶ್ವನಾಥ್ ಹಾಗೂ ಮಾಜಿ ಸಚಿವ ಸಾ ರಾ ಮಹೇಶ್ ಅವರ ಆಣೆ ಪ್ರಮಾಣದ ವಿಚಾರಕ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ಅನರ್ಹ ಶಾಸಕ ಹೆಚ್ ವಿಶ್ವನಾಥ್ - ಮಾಜಿ ಸಚಿವ ಸಾರಾ ಮಹೇಶ್ ನಡುವೆ ಆಣೆ ಪ್ರಮಾಣ;ಗುಂಡೂರಾವ್ ಬೇಸರ

By

Published : Oct 16, 2019, 10:14 PM IST

ಬೆಂಗಳೂರು: ಹುಣಸೂರು ಅನರ್ಹ ಶಾಸಕ ಹೆಚ್.ವಿಶ್ವನಾಥ್ ಹಾಗೂ ಮಾಜಿ ಸಚಿವ ಸಾ ರಾ ಮಹೇಶ್ ಅವರ ಆಣೆ ಪ್ರಮಾಣದ ವಿಚಾರಕ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ತಾಯಿ ಚಾಮುಂಡೇಶ್ವರಿ ಮುಂದೆ ಆಣೆ ಪ್ರಮಾಣ ಮಾಡಲು ಮುಂದಾಗಿರುವ ಉಭಯ ನಾಯಕರಿಗೂ ಟ್ವೀಟ್ ಮೂಲಕ ಸಲಹೆ ನೀಡಿರುವ ದಿನೇಶ್ ಗುಂಡೂರಾವ್, ಈ ರೀತಿ ನಿರ್ಧಾರ ಕೈಗೊಂಡಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಟ್ವೀಟ್ ಮೂಲಕ ಉತ್ತರ:

ಮೊದಲ ಟ್ವೀಟ್‌ನಲ್ಲಿ ಹೆಚ್.ವಿಶ್ವನಾಥ್ ಅವರ ನಿಲುವು ಖಂಡಿಸಿರುವ ಗುಂಡೂರಾವ್, ನೀವೆಷ್ಟು ಪ್ರಾಮಾಣಿಕರು, ಯೋಗ್ಯರು ಎಂಬುದು ರಾಜ್ಯಕ್ಕೇ ತಿಳಿದಿದೆ. ನಾಡಿನ ಅಧಿದೇವತೆ ತಾಯಿ ಚಾಮುಂಡಿಯ ಪುಣ್ಯಕ್ಷೇತ್ರವನ್ನು ನಿಮ್ಮ ಆಣೆ ಪ್ರಮಾಣದ ರಾಜಕೀಯ ದೊಂಬರಾಟದ ಅಖಾಡ ಮಾಡಿಕೊಂಡು ಅಪವಿತ್ರಗೊಳಿಸಬೇಡಿ. ಮುಂದೆ ಚುನಾವಣೆಗಳು ಬರುತ್ತಿವೆ, ಜನತಾ ನ್ಯಾಯಾಲಯದ ಮುಂದೆ ನಿಮ್ಮ ಯೋಗ್ಯತೆ ಸಾಬೀತುಪಡಿಸಿ ಎಂದಿದ್ದಾರೆ.

ಎರಡನೇ ಟ್ವೀಟ್‌ನಲ್ಲಿ ಮಾಜಿ ಸಚಿವ ಸಾರಾ ಮಹೇಶ್ ಅವರಿಗೆ ಸಲಹೆ ನೀಡಿರುವ ದಿನೇಶ್ ಗುಂಡೂರಾವ್, ಹೆಚ್.ವಿಶ್ವನಾಥ್ ಅವರು ತಮ್ಮ ಸ್ವಾರ್ಥ, ಅಧಿಕಾರದ ಆಸೆಗೆ ಕಮಲ ಹಿಡಿಯಲು ಹೋಗಿ ನಿಂತಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಉತ್ತಮ ವ್ಯಕ್ತಿತ್ವ ಕಾಪಾಡಿಕೊಳ್ಳಲು ನೀವು ಆ ಕೆಸರಿಂದ ದೂರ ಉಳಿಯುವುದೇ ಲೇಸು. ಕೆಸರೆರಚಾಟ ಮಾಡುವವರನ್ನು ನಿರ್ಲಕ್ಷಿಸಿರಿ ಮುನ್ನಡೆಯಿರಿ, ಮುಂದಿನದು ಜನತೆಗೆ ತೀರ್ಮಾನಿಸಲು ಬಿಡಿ ಎಂದಿದ್ದಾರೆ.

ABOUT THE AUTHOR

...view details