ಕರ್ನಾಟಕ

karnataka

By

Published : Sep 26, 2019, 8:03 PM IST

ETV Bharat / state

ಅನರ್ಹರು ಅಸಹಾಯಕರು ಎಂದು ಸುಪ್ರಿಂ ತೀರ್ಪು ಸ್ವಾಗತಿಸಿದ ಗುಂಡೂರಾವ್

ಅವರ ಲಾಯರ್​ ವಾದ ಅಷ್ಟು ಚೆನ್ನಾಗಿದ್ದಿದ್ದರೆ ಸುಪ್ರಿಂ ಇವತ್ತೇ ಅನರ್ಹತೆ ರದ್ದುಗೊಳಿಸುತ್ತಿತ್ತು. ಅವರು ಶಾಸಕರಾಗಿಯೇ ಮುಂದುವರೆಯುತಿದ್ದರು, ಉಪಚುನಾವಣೆಯ ಅವಶ್ಯಕತೆ ಬರುತ್ತಿರಲಿಲ್ಲ. ಆದರೆ, ಸುಪ್ರೀಂಕೋರ್ಟ್​ನ ನ್ಯಾಯಾಧೀಶರಿಗೆ ನಮ್ಮ ಲಾಯರ್​​ ಮಾಡಿರುವ ವಾದ ಮನವರಿಕೆ ಆಗಿದೆ. ಜನರ ಮತಗಳನ್ನು ವ್ಯಾಪಾರಕ್ಕೆ ಬಳಸಿಕೊಂಡವರಿಗೆ ಮುಂದಿನ ದಿನಗಳಲ್ಲಿ ಸರಿಯಾದ ಶಿಕ್ಷೆಯಾಗುತ್ತೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್

ಬೆಂಗಳೂರು : ಸುಪ್ರಿಂ ತೀರ್ಪು ಸ್ವಾಗತ ಮಾಡುತ್ತೇನೆ. ಅನರ್ಹರು, ಅಸಹಾಯಕರು, ಅತೃಪ್ತರು ಶಾಸಕರ ಪರಿಸ್ಥಿತಿ ಅದೇ ಸ್ಥಿತಿಯಲ್ಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಅವರ ಲಾಯರ್​ ವಾದ ಅಷ್ಟು ಚೆನ್ನಾಗಿದ್ದಿದ್ದರೆ ಸುಪ್ರೀಂ ಇವತ್ತೇ ಅನರ್ಹತೆ ರದ್ದುಗೊಳಿಸುತ್ತಿತ್ತು. ಅವರು ಶಾಸಕರಾಗಿಯೇ ಮುಂದುವರೆಯುತ್ತಿದ್ದರು, ಉಪಚುನಾವಣೆಯ ಅವಶ್ಯಕತೆ ಬರುತ್ತಿರಲಿಲ್ಲ. ಆದರೆ, ಸುಪ್ರೀಂಕೋರ್ಟ್​ನ ನ್ಯಾಯಾಧೀಶರಿಗೆ ನಮ್ಮ ಲಾಯರ್​​ ಮಾಡಿರುವ ವಾದ ಮನವರಿಕೆಯಾಗಿದೆ. ಜನರ ಮತಗಳನ್ನು ವ್ಯಾಪಾರಕ್ಕೆ ಬಳಸಿಕೊಂಡವರಿಗೆ ಮುಂದಿನ ದಿನಗಳಲ್ಲಿ ಸರಿಯಾದ ಶಿಕ್ಷೆಯಾಗುತ್ತೆ.

ಸುಪ್ರೀಂಕೋರ್ಟ್​​ ತೀರ್ಪಿನ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ

ನಮ್ಮ ವಕೀಲರು ಮತ್ತು ಸ್ಪೀಕರ್ ಆದೇಶದ ಬಗ್ಗೆ ಎಷ್ಟು ಕೆಟ್ಟದಾಗಿ ಮಾತನಾಡಿದ್ದರು. ರಮೇಶ್ ಕುಮಾರ್ ನೀಡಿದ್ದ ತೀರ್ಪು ಕೋರ್ಟ್ ತಡೆಹಿಡಿದಿಲ್ಲ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಮುಂದೆ ಬರುವ ತೀರ್ಪು ಇಡೀ ದೇಶಕ್ಕೆ ಮಾದರಿಯಾದ ತೀರ್ಪಾಗಿರುತ್ತದೆ. ರಿಲೀಫ್ ಏನು ಸಿಕ್ಕಿದೆ ಅನರ್ಹರಿಗೆ? ಇನ್ನೂ ಕೂಡ ಅವರು ಅನರ್ಹರೇ, ಅತೃಪ್ತರೇ, ಅಸಹಾಕಯರೇ. ಮುಂದಿನ ತಿಂಗಳ ಆಗಲಿ, ಕಾದು ನೋಡೋಣ, ಇದು ಸಂವಿಧಾನ ಪೀಠಕ್ಕೆ ಹೋಗಬೇಕೋ ಏನೋ ಗೊತ್ತಿಲ್ಲ ಎಂದರು.

ABOUT THE AUTHOR

...view details