ಕರ್ನಾಟಕ

karnataka

ETV Bharat / state

ದಿನೇಶ್​​​ ಗುಂಡೂರಾವ್​​​ ಸುಪ್ರೀಂ ಆದೇಶ ತಿರುಚುತ್ತಿದ್ದಾರೆ: ಬಿಜೆಪಿ

ಸುಪ್ರೀಂ ಕೋರ್ಟ್ ನೀಡಿದ ಮಧ್ಯಂತರ ಆದೇಶವನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿರುಚಿ ಹೇಳುತ್ತಿದ್ದಾರೆ. ಇದನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬಸವರಾಜ ಬೊಮ್ಮಾಯಿ

By

Published : Jul 17, 2019, 9:05 PM IST

ಬೆಂಗಳೂರು: ಸುಪ್ರೀಂ ಕೋರ್ಟ್ ನೀಡಿದ ಮಧ್ಯಂತರ ಆದೇಶವನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿರುಚಿ ಹೇಳುವ ಕೆಲಸ ಮಾಡುತ್ತಿದ್ದಾರೆ. ಇದು ಸುಪ್ರೀಂ ಕೋರ್ಟ್ ಆದೇಶಕ್ಕೆ ಮಾಡುತ್ತಿರುವ ಅವಮಾನ. ಇದನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ರಮಡಾ ರೆಸಾರ್ಟ್​ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೊಮ್ಮಾಯಿ, ಸುಪ್ರೀಂ ಕೋರ್ಟಿನ ಆದೇಶ ತಿರುಚಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿರುವ ಅಂಶಗಳನ್ನು ಹೇಳುತ್ತಿರುವುದನ್ನು ಬಿಜೆಪಿ ಖಂಡಿಸುತ್ತದೆ ಎಂದರು.

ದಿನೇಶ್ ಗುಂಡೂರಾವ್ ಸುಪ್ರೀಂ ಆದೇಶ ತಿರುಚುತ್ತಿದ್ದಾರೆ: ಬಿಜೆಪಿ ಖಂಡನೆ

ಕಾಂಗ್ರೆಸ್ - ಜೆಡಿಎಸ್ ನಾಯಕರು ವಿಶ್ವಾಸಮತ ಯಾತನೆಯನ್ನು ಮುಂದೂಡಲು ನೋಡುತ್ತಿದ್ದಾರೆ. ನಿಜವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇದ್ದರೆ ವಿಶ್ವಾಸಮತ ಯಾಚಿಸಬೇಕು. ಇಲ್ಲವಾದರೆ ಅದು ಪ್ರಜಾಪ್ರಭುತ್ವ ವಿರೋಧಿಯಾಗುತ್ತದೆ. ಸುಪ್ರೀಂ ಕೋರ್ಟ್ ಆದೇಶ ಧಿಕ್ಕರಿಸಿದಂತಾಗುತ್ತದೆ ಎಂದು ಹೇಳಿದರು.

ಕೆಪಿಜೆಪಿ ಸದಸ್ಯ ಶಂಕರ್​ನನ್ನು ಅನರ್ಹ ಮಾಡಲು ಕಾಂಗ್ರೆಸ್ ಕಾನೂನು ಬಾಹಿರವಾಗಿ ದೂರು ನೀಡಿದೆ. ಮರ್ಜರ್ ಆಗಿಲ್ಲ ಎಂದು ಪಕ್ಷದ ಅಧ್ಯಕ್ಷರು ಸ್ಪೀಕರ್​​ಗೆ ದೂರು ನೀಡಿದ್ದಾರೆ. ಆದರೆ ಶಂಕರ್ ಕೆಪಿಜೆಪಿಯಲ್ಲೇ ಮುಂದುವರೆಯುತ್ತೇನೆಂದು ಹೇಳಿದ್ದಾರೆ. ಕಾಂಗ್ರೆಸ್ ವಾಮಮಾರ್ಗ ಅನುಸರಿಸಬಾರದು. ಇದೇ ರೀತಿ ಮುಂದುವರೆದರೆ ರಾಜ್ಯದ ಜನತೆ ತೀವ್ರವಾಗಿ ವಿರೋಧಿಸುತ್ತಾರೆ ಎಂದು ಎಚ್ಚರಿಸಿದರು.

For All Latest Updates

TAGGED:

ABOUT THE AUTHOR

...view details