ಕರ್ನಾಟಕ

karnataka

ETV Bharat / state

ಕೆ.ಆರ್ ಪುರ ಉಪಕದನ: ಕೈ ಅಭ್ಯರ್ಥಿ ನಾರಾಯಣಸ್ವಾಮಿಗೆ ಬಿ ಫಾರಂ ಹಸ್ತಾಂತರ - ಕಾಂಗ್ರೆಸ್ ಅಭ್ಯರ್ಥಿ ನಾರಾಯಣ ಸ್ವಾಮಿ

ಕೆ.ಆರ್.ಪುರ ವಿಧಾನಸಭೆ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ನಾರಾಯಣ ಸ್ವಾಮಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬಿ ಫಾರಂ ಹಸ್ತಾಂತರಿಸಿದರು.

ಕೈ ಅಭ್ಯರ್ಥಿ ನಾರಾಯಣಸ್ವಾಮಿಗೆ ಬಿ ಫಾರಂ ಹಸ್ತಾಂತರ

By

Published : Nov 16, 2019, 7:40 PM IST

ಬೆಂಗಳೂರು: ಕೆ.ಆರ್.ಪುರ ವಿಧಾನಸಭೆ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ನಾರಾಯಣ ಸ್ವಾಮಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬಿ ಫಾರಂ ಹಸ್ತಾಂತರಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ, ತಮ್ಮ ಬೆಂಬಲಿಗರ ಜೊತೆ ಆಗಮಿಸಿ ನಾರಾಯಣಸ್ವಾಮಿ ಬಿ.ಫಾರಂ ಪಡೆದುಕೊಂಡಿದ್ದು, ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ.

ಈ ಸಂದರ್ಭ ಸುದ್ದಿಗಾರರ ಜೊತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ನನ್ನ ಪತ್ನಿಗೂ ರಾಜಕೀಯ ಜ್ಞಾನವಿತ್ತು. ಮೊದಲೇ ಆಗಿದ್ದಿದ್ದರೆ ಯೋಚನೆ ಮಾಡಬಹುದಿತ್ತು. ಈಗ ಉಳಿದಿರೋದು ಕೇವಲ 20 ದಿನ ಮಾತ್ರ. ಗೆಲ್ಲುವ ಅರ್ಹತೆಯೂ ಅವರಿಗಿತ್ತು. ಆದರೆ, ಈಗ ಚುನಾವಣೆಗೆ ನಿಲ್ಲುವ ಯೋಚನೆ ಇಲ್ಲ ಎಂದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿಕೆ

ಏಳು ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕುರಿತು ಚರ್ಚೆ ಮುಗಿದಿದೆ. ಯಾವಾಗ ಬೇಕಾದರೂ ಪಟ್ಟಿ ರಿಲೀಸ್ ಆಗಬಹುದು. ನಿನ್ನೆ ದೆಹಲಿಗೆ ತೆರಳಿ ಚರ್ಚಿಸಿದ್ದೇವೆ. ಯಾವುದೇ ಕ್ಷೇತ್ರದ ಟಿಕೆಟ್ ಬಗ್ಗೆ ಗೊಂದಲವಿಲ್ಲ. ಇಂದು ಟಿಕೆಟ್ ಹಂಚಿಕೆಯಾಗಲಿದೆ. ಕೆ.ಆರ್.ಪುರ ನಾಮಪತ್ರ ಸಲ್ಲಿಕೆಗೆ ಹೋಗ್ತೇನೆ. ನಾವೇ ಚುನಾವಣಾ ಪ್ರಚಾರ ನಡೆಸುತ್ತೇವೆ ಎಂದು ತಿಳಿಸಿದರು.

ಕೋಮುವಾದಿ ಪಕ್ಷಕ್ಕೆ ಹೋಗಿ ದೊಡ್ಡ ತಪ್ಪು ಮಾಡಿದ್ದಾರೆ. ಎಂಟಿಬಿ ಇವತ್ತು ರೇಸ್​ನಲ್ಲಿಲ್ಲ. ಅವರು ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನುವಂತಾಗಿದೆ. ಪಾಪ ಅವರ ಸ್ಥಿತಿ ಏನಾಗಿದೆ ನೋಡಿ ಎಂದು ಅಣಿಕಿಸಿದರು.

ಲಖನ್ ಜಾರಕಿಹೊಳಿಗೆ ಕುಮಾರಸ್ವಾಮಿ ಬೆಂಬಲ ವಿಚಾರವಾಗಿ ಮಾತನಾಡಿದ ದಿನೇಶ್ ಗುಂಡೂರಾವ್​, ಅದರ ಬಗ್ಗೆ ನಮಗೆ ಗೊತ್ತಿಲ್ಲ. ಯಾರು ಯಾರಿಗೆ ಬೆಂಬಲ ಕೊಡ್ತಾರೆ ಗೊತ್ತಿಲ್ಲ. ಗೋಕಾಕ್ ಟಿಕೆಟ್ ಬಗ್ಗೆ ಗೊಂದಲವಿಲ್ಲ. ಟಿಕೆಟ್ ಬಗ್ಗೆ ಈಗಾಗಲೇ ಫಿಕ್ಸ್ ಆಗಿದೆ. ರೋಷನ್ ಬೇಗ್ ಯಾಕೆ ಬಿಜೆಪಿಗೆ ಹೋದ್ರು ಗೊತ್ತಿಲ್ಲ. ಹಲವು ವರ್ಷಗಳಿಂದ ಪಕ್ಷದಲ್ಲಿದ್ದವರು. ಅವರ ಮಾತಿಗೆ ನಾವು ಬೆಲೆ ನೀಡುತ್ತಿದ್ದೆವು. ಕೋಮುವಾದಿ ಪಕ್ಷಕ್ಕೆ ಹೋಗಿ ಸೇರಿಕೊಂಡಿದ್ದಾರೆ. ಈಗ ನಮ್ಮ ಪಕ್ಷದಲ್ಲೇ ಇಲ್ಲ. ಬೆಂಬಲ ಕೊಡೋದು ಬಿಡೋದು ಅನ್ನೋದಕ್ಕೆ ಏನೂ ಉಳಿದಿಲ್ಲ.

ABOUT THE AUTHOR

...view details