ಬೆಂಗಳೂರು:ಸತೀಶ್ ಜಾರಕಿಹೊಳಿ ಕೆಟ್ಟ ರೀತಿ ಹಿಂದೂ ಪದ ಬಳಸಿಲ್ಲ . ಅಲ್ಲಿ ಮುಸ್ಲಿಂ ಓಲೈಕೆ ಪ್ರಶ್ನೆಯೇ ಇಲ್ಲ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಮರ್ಥಿಸಿಕೊಂಡಿದ್ದಾರೆ. ಸತೀಶ್ ಜಾರಕಿಹೊಳಿ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಎಲ್ಲಿ ಮಾತಾಡಬೇಕು. ಯಾವ ರೀತಿ ಹೇಳಬೇಕು ಎಂದು ತಿಳಿಯಬೇಕು.
ಸತೀಶ್ ಜಾರಕಿಹೊಳಿ ಈಗಾಗಲೇ ಸ್ಪಷ್ಠೀಕರಣ ಕೊಟ್ಟಿದ್ದು, ಹಿಂದೂ ಪದ ಪರ್ಷಿಯನ್ ಭಾಷೆಯಿಂದ ಬಂದಿರುವ ಬಗ್ಗೆ ದಾಖಲೆಗಳಿವೆ. ದಾಖಲೆಗಳು ಇಲ್ಲ ಎಂದು ನಾನು ಹೇಳಲ್ಲ. ಬೇರೆ ಭಾಷೆಯಿಂದ ಬಂದಿದೆ ಎಂದು ಅವರು ಹೇಳಿದ್ದಾರೆ ಎಂದರು.
ಮಕ್ಕಳೊಂದಿಗೆ ಗಂಧದ ಗುಡಿ ವೀಕ್ಷಿಸಿದ ದಿನೇಶ್ ಗುಂಡೂರಾವ್ ಸತೀಶ ಮೂಢನಂಬಿಕೆ ವಿರುದ್ಧ ಹೋರಾಟ:ಸತೀಶ್ ಜಾರಕಿಹೊಳಿ ಮೂಢನಂಬಿಕೆ ವಿರುದ್ಧ ಇರುವವರು. ಮನುಷ್ಯತ್ವಕ್ಕಾಗಿ ಧರ್ಮ ಬೇಕು . ಧರ್ಮಕ್ಕಾಗಿ ಮನುಷ್ಯತ್ವ ತ್ಯಾಗ ಮಾಡಲು ಆಗಲ್ಲ ಎಂಬುವದನ್ನು ಅವರು ರೂಢಿಸಿಕೊಂಡಿದ್ದಾರೆ. ಬಿಜೆಪಿ ಮತ್ತು ಆರ್ಎಸ್ಎಸ್ನವರಿಗೆ ಮನುಷ್ಯತ್ವ ಇಲ್ಲ. ಒಂದೊಂದು ಸಾರಿ ಅರ್ಥ ಬೇರೇನೂ ಇರಬಹುದು ಎಂದು ತಿಳಿಸಿದರು.
ಡಿಕೆಶಿ ಬಿಜೆಪಿಗೆ ಬರಲಿ ಮುನಿರತ್ನ ಹೇಳಿಕೆಗೆ ಟಾಂಗ್: ಡಿಕೆಶಿ ಬಿಜೆಪಿಗೆ ಬರಲಿ ಎಂಬ ಮುನಿರತ್ನ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮುನಿರತ್ನ ಹೇಗೆ ಯಾವ ರೀತಿ ರಾಜಕಾರಣಕ್ಕೆ ಬಂದ್ರು?. ಈಗ ಅದರ ಚರ್ಚೆ ಬೇಕಿಲ್ಲ. ಮುನಿರತ್ನ ಡಿಕೆಶಿಗೆ ಸಲಹೆ ನೀಡುವುದು ಬೇಡ. ಡಿಕೆಶಿ ಬಿಜೆಪಿಗೆ ಸೆಳೆಯಲು ಇಡಿ,ಐಟಿ ಎಲ್ಲ ಬಿಡ್ತಿದ್ದಾರೆ. ಮುನಿರತ್ನ ಹೈಕಮಾಂಡ್ ಕೇಳಿಕೊಂಡು ಮಾತನಾಡಿಲ್ಲ ಎಂದು ಮುನಿರತ್ನಗೆ ಟಾಂಗ್ ನೀಡಿದರು.
ಮಕ್ಕಳೊಂದಿಗೆ ಗಂಧದ ಗುಡಿ ವೀಕ್ಷಣೆ: ಗಾಂಧಿನಗರದ ನರ್ತಕಿ ಥಿಯೇಟರ್‌ನಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ದಿ.ಪುನೀತ್ ಅಭಿನಯದ ಗಂಧದ ಗುಡಿ ಸಿನಿಮಾ ಉಚಿತ ವೀಕ್ಷಣೆಗೆ ಅವಕಾಶ ಮಾಡಿದರು. 600 ಶಾಲಾ ಮಕ್ಕಳಿಗೆ ಉಚಿತ ಟಿಕೆಟ್ ಹಂಚಿಕೆ ಮಾಡಲಾಗಿದೆ. ಮಕ್ಕಳ ಜೊತೆ ದಿನೇಶ್ ಗುಂಡೂರಾವ್ ಸಿನಿಮಾ ವೀಕ್ಷಿಸಿದರು.
ಗಂಧದಗುಡಿ ಪುನೀತ್ ಅವರ ಕೊನೆಯ ಚಿತ್ರ. ಕನ್ನಡ ಚಿತ್ರರಂಗದಲ್ಲಿ ಈ ರೀತಿಯ ಸಿನಿಮಾ ಬಂದಿಲ್ಲ. ಅಶ್ವಿನಿ ಪುನೀತ್ ಗೆ ಅಭಿನಂದನೆ ತಿಳಿಸ್ತೇನೆ. ಸರ್ಕಾರದವರು ಟ್ಯಾಕ್ಸ್ ಫ್ರೀ ಮಾಡಬೇಕಿತ್ತು. ಆದರೆ ಮಾಡಲಿಲ್ಲ. ಹಾಗಾಗಿ ಟಿಕೆಟ್ ದರ ಕಡಿಮೆ ಮಾಡಿದ್ದಾರೆ. ನಮ್ಮ ಕ್ಷೇತ್ರದ ಶಾಲಾ ಮಕ್ಕಳನ್ನು ಕರೆತಂದಿದ್ದೇವೆ. ಅಪ್ಪು ಬಗ್ಗೆ ನಮಗೆ ಅಭಿಮಾನವಿದೆ. ಸರ್ಕಾರಿ ಶಾಲಾ ಮಕ್ಕಳ ಸಿನಿಮಾ ನೋಡುವುದು ಅಪರೂಪ. ಅದಕ್ಕಾಗಿ ಅವಕಾಶ ಮಾಡಿಕೊಟ್ಟಿದ್ದೇವೆ ಎಂದರು.
ಇದನ್ನು ಓದಿ:ಹಿಂದೂಗಳನ್ನು ತೆಗಳಿದ್ರೆ ಅಲ್ಪಸಂಖ್ಯಾತರ ವೋಟ್ ಬರುತ್ತೆ ಅನ್ನೋ ಲೆಕ್ಕಾಚಾರ: ಆರಗ ಜ್ಞಾನೇಂದ್ರ