ಬೆಂಗಳೂರು: ರಾಜ್ಯ ಸರ್ಕಾರ ಆನ್‌ಲೈನ್ ಗೇಮ್ ಗಳಿಗೆ ಕಡಿವಾಣ ಹಾಕಬೇಕು ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.
ಆನ್‌ಲೈನ್ ಗೇಮಿಂಗ್ ಗೆ ಕಡಿವಾಣ ಹಾಕಲು ಸರ್ಕಾರಕ್ಕೆ ದಿನೇಶ್ ಗುಂಡೂರಾವ್ ಆಗ್ರಹ - Dinesh Gundurao calls ban to online Game
ಹಣವನ್ನು ಬಾಜಿ ಕಟ್ಟಿ ಆಡುವುದು ಜೂಜು ಎಂಬುದು ನಿರ್ವಿವಾದ. ಇಂತಹ ಜೂಜಿಗೆ ವಿಶೇಷವಾಗಿ ಯುವಕರು ಆಕರ್ಷಿತರಾಗಿರುವುದು ದುರಂತ. ಸರ್ಕಾರ ಈ ಮನೆಹಾಳು ಗೇಮಿಂಗ್‌ಗಳ ಮೇಲೆ ನಿಷೇಧ ಹೇರಲಿ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದಾರೆ.
![ಆನ್‌ಲೈನ್ ಗೇಮಿಂಗ್ ಗೆ ಕಡಿವಾಣ ಹಾಕಲು ಸರ್ಕಾರಕ್ಕೆ ದಿನೇಶ್ ಗುಂಡೂರಾವ್ ಆಗ್ರಹ Dinesh Gundurao calls to ban the online gaming](https://etvbharatimages.akamaized.net/etvbharat/prod-images/768-512-9555909-798-9555909-1605501219571.jpg)
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ರಮ್ಮಿ, ಪೋಕರ್ ಸೇರಿ ಆನ್‌ಲೈನ್ ಗೇಮಿಂಗ್ ಎಂಬ ಜೂಜಿನ ವ್ಯಸನಕ್ಕೆ ಹಲವು ಯುವಕರು ಬಲಿಯಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ನಾನೂ ಕೂಡ ಹಲವು ಯುವಕರು ಈ ಆನ್‌ಲೈನ್ ಜೂಜಿನಲ್ಲಿ ವ್ಯಸನರಾಗಿರುವುದನ್ನು ಗಮನಿಸಿದ್ದೇನೆ. ಇದರಿಂದ ಎಷ್ಟೋ ಕುಟುಂಬಗಳು ನಾಶವಾಗಿ ಹೋಗಿದೆ. ಹಾಗಾಗಿ ಇಂತಹ ಗೇಮ್‌ಗಳ ಮೇಲೆ ಕಡಿವಾಣ ಬೀಳಬೇಕು ಎಂದಿದ್ದಾರೆ.
ಆನ್‌ಲೈನ್ ಆಟ 'ಕೇವಲ ಕೌಶಲ್ಯದ ಆಟ. ಅದೃಷ್ಟದ ಆಟವಲ್ಲ' ಎಂಬ ಆಧಾರದ ಮೇಲೆ ಕಾನೂನಿನ ಮಾನ್ಯತೆ ಪಡೆದುಕೊಂಡಿದೆ. ನಾನು ಈ ವಾದ ಒಪ್ಪುವುದಿಲ್ಲ. ನನ್ನ ಪ್ರಕಾರ, ಹಣವನ್ನು ಬಾಜಿ ಕಟ್ಟಿ ಆಡುವುದು 'ಜೂಜು' ಎಂಬುದು ನಿರ್ವಿವಾದ. ಇಂತಹ ಜೂಜಿಗೆ ವಿಶೇಷವಾಗಿ ಯುವಕರು ಆಕರ್ಷಿತರಾಗಿರುವುದು ದುರಂತ. ಸರ್ಕಾರ ಈ ಮನೆಹಾಳು ಗೇಮಿಂಗ್‌ಗಳ ಮೇಲೆ ನಿಷೇಧ ಹೇರಲಿ ಎಂದು ಅಭಿಪ್ರಾಯಪಟ್ಟಿದ್ದಾರೆ.