ಬೆಂಗಳೂರು : ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಕೊರೊನಾ ಸೋಂಕಿತರಲ್ಲಿ ಭಾರತವನ್ನು ಮೊದಲ ಸ್ಥಾನಕ್ಕೆ ತರುವುದೇ 'ಮೋದಿ ಮಾದರಿ'; ದಿನೇಶ್ ಗುಂಡೂರಾವ್ - Dinesh Gundu Rao Tweet
ಕೇಂದ್ರ ಸರ್ಕಾರದ ವಿರುದ್ಧ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಸಮರವನ್ನು ಮುಂದುವರೆಸಿದ್ದಾರೆ. ಮೋದಿ ಜೇಬು ಖಾಲಿ ಆಗುವಂತೆ ಮಾಡುತ್ತಿದ್ದಾರೆ ಎಂದು ನಿನ್ನೆ ಟೀಕಿಸಿದ್ದ ಗುಂಡೂರಾವ್, ಇಂದು ಮತ್ತೊಂದು ಟ್ವೀಟ್ ಮಾಡುವ ಮೂಲಕ ಮೋದಿ ಕಾಲೆಳೆದಿದ್ದಾರೆ.
![ಕೊರೊನಾ ಸೋಂಕಿತರಲ್ಲಿ ಭಾರತವನ್ನು ಮೊದಲ ಸ್ಥಾನಕ್ಕೆ ತರುವುದೇ 'ಮೋದಿ ಮಾದರಿ'; ದಿನೇಶ್ ಗುಂಡೂರಾವ್ Dinesh Gundu Rao Tweet Against Modi Govt](https://etvbharatimages.akamaized.net/etvbharat/prod-images/768-512-8718679-813-8718679-1599501973602.jpg)
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕೊರೊನಾ ವಿರುದ್ಧ ಮೋದಿಯವರ ಕ್ರಮ ಇಡೀ ವಿಶ್ವಕ್ಕೇ ಮಾದರಿ ಎಂದು ಬಿಜೆಪಿ ನಾಯಕರು ಬಿಂಬಿಸಿಕೊಂಡಿದ್ರು. ಕೊರೊನಾ ಸೋಂಕಿತರಲ್ಲಿ ಭಾರತವನ್ನು ಮೊದಲ ಸ್ಥಾನಕ್ಕೆ ತರುವುದೇ 'ಮೋದಿ ಮಾದರಿ' ಎಂದು ಅರ್ಥವಾಗಿದ್ದೇ ಈಗ. ನಾವೀಗ ನಂಬರ್ 2ರಲ್ಲಿ ಇದ್ದೇವೆ. ಇನ್ನೇನು ಕೆಲವೇ ದಿನಗಳಲ್ಲಿ ನಾವು ನಂಬರ್ 1 ಆಗುವುದರಲ್ಲಿ ಅನುಮಾನವೇ ಇಲ್ಲ!! ಎಂದು ಲೇವಡಿ ಮಾಡಿದ್ದಾರೆ.
ನಿನ್ನೆ ಕೂಡ ಟ್ವೀಟ್ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಅವರು, ಪ್ರಧಾನಿ ನರೇಂದ್ರ ಮೋದಿ ದೇಶವನ್ನು ನಗದುರಹಿತ ಮಾಡುತ್ತೇನೆ ಎಂದಿದ್ದರು. ಅದೇ ರೀತಿ ಜನರ ಜೇಬು ಖಾಲಿ ಆಗುವಂತೆ ಮಾಡುತ್ತಿದ್ದಾರೆ ಎಂದು ಹೇಳಿದ್ದರು. ಇಂದು ಅದರ ಮುಂದುವರಿದ ಭಾಗದ ರೀತಿ ತಮ್ಮ ಆರೋಪ ಮಾಡಿದ್ದಾರೆ.