ಕರ್ನಾಟಕ

karnataka

ETV Bharat / state

'ಮೋದಿ ಕೊರೊನಾ ಹೆಸರಲ್ಲಿ ಕಲೆಕ್ಷನ್ ಏಜೆಂಟ್ ಆಗಿದ್ದಾರಾ?' ದಿನೇಶ್ ಗುಂಡೂರಾವ್ ಪ್ರಶ್ನೆ - Bangaluru latest news

ಪಿಎಂ ಕೇರ್ಸ್ ಫಂಡ್, ವೈದ್ಯ ನಾಗೇಂದ್ರ ಆತ್ಮಹತ್ಯೆ, ಐಎಎಸ್ ಅಧಿಕಾರಿ ಡಿ.ಕೆ. ರವಿ ಹಾಗೂ ಪೊಲೀಸ್ ಅಧಿಕಾರಿ ಗಣಪತಿ ಆತ್ಮಹತ್ಯೆ ಪ್ರಕರಣ ಸೇರಿದಂತೆ ಹತ್ತು ಹಲವು ಪ್ರಕರಣಗಳ ಬಗ್ಗೆ ಟ್ವೀಟ್​ ಮಾಡಿರುವ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಬಿಜೆಪಿ ನಾಯಕರೇ, ಈ ಸಾವುಗಳಿಗೆ ನ್ಯಾಯ ಕೊಡಿಸುವರು ಯಾರು? ಎಂದು ಕೇಳಿದ್ದಾರೆ.

Dinesh Gundu Rao Tweet About  PM Cares Fund
ದಿನೇಶ್ ಗುಂಡೂರಾವ್

By

Published : Aug 22, 2020, 10:59 PM IST

ಬೆಂಗಳೂರು: ಪ್ರಧಾನಿ ಮೋದಿ ಕೊರೊನಾ ಹೆಸರಲ್ಲಿ ಕಲೆಕ್ಷನ್ ಏಜೆಂಟ್ ಆಗಿದ್ದಾರಾ? ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕೊರೊನಾ ಪರಿಹಾರಕ್ಕಾಗಿ ಮೋದಿ ಸ್ಥಾಪಿಸಿದ ಪಿಎಂ ಕೇರ್ಸ್ ಫಂಡ್‌ಗೆ ಅಪ್ಪ ಅಮ್ಮನೆ ಇಲ್ಲವಂತೆ. ಹಾಗಾದರೆ ಪ್ರಧಾನಿ ಮೋದಿ ಕೊರೊನಾ ಹೆಸರಲ್ಲಿ ಕಲೆಕ್ಷನ್ ಏಜೆಂಟ್ ಆಗಿದ್ದಾರಾ? ಅಥವಾ ಕೊರೊನಾ ಹೆಸರಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಿದ ದುಡ್ಡನ್ನು ಮನೆ ಖರ್ಚಿಗೆ ಬಳಸಿಕೊಳ್ಳುತ್ತಿದ್ದಾರಾ? ಪಾರದರ್ಶಕತೆ ಯಾಕಿಲ್ಲ? ಉತ್ತರಿಸಿ ಬಿಜೆಪಿ ನಾಯಕರೇ ಎಂದು ಹೇಳಿದ್ದಾರೆ.

ಪಿಎಂ ಕೇರ್ಸ್ ಫಂಡ್ ಬಗ್ಗೆ ಈಗಾಗಲೇ ಹಲವು ರಾಷ್ಟ್ರೀಯ ಹಾಗೂ ರಾಜ್ಯ ಕಾಂಗ್ರೆಸ್ ನಾಯಕರು ದನಿ ಎತ್ತಿದ್ದು, ಇಲ್ಲಿ ಸಾಕಷ್ಟು ಗೋಲ್​ಮಾಲ್​ ಆಗಿದೆ ಎಂದು ಆರೋಪಿಸುತ್ತಿದ್ದಾರೆ. ಇಂದಿನವರೆಗೆ ಸಂಗ್ರಹವಾಗಿರುವ ಹಣದ ಮೊತ್ತದ ಲೆಕ್ಕವನ್ನು ಕೂಡ ಕಾಂಗ್ರೆಸ್ ಕೇಳಿದ್ದು, ಯಾವುದೇ ಪ್ರತಿಕ್ರಿಯೆ ಸಿಗದ ಹಿನ್ನೆಲೆ ಸುಪ್ರೀಂಕೋರ್ಟ್ ಮೂಲಕವೂ ಪ್ರಯತ್ನಿಸಿದೆ. ಒಟ್ಟಾರೆ, ವಿವಿಧ ಕಾಂಗ್ರೆಸ್ ನಾಯಕರು ಪ್ರಧಾನಿ ಸ್ಥಾಪಿಸಿರುವ ಈ ನಿಧಿಯ ಬಗ್ಗೆ ಸಂಶಯ ವ್ಯಕ್ತವಾಗಿದ್ದು ಯಾವಾಗ ಇದಕ್ಕೆ ಉತ್ತರ ಸಿಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ನಾಗೇಂದ್ರ ಆತ್ಮಹತ್ಯೆ ಕಾರಣ ಬಯಲಾಗಲಿ:

ದಿನೇಶ್ ಗುಂಡೂರಾವ್ ಮಾಡಿರುವ ಇನ್ನೊಂದು ಟ್ವೀಟ್​ನಲ್ಲಿ, ವೈದ್ಯ ನಾಗೇಂದ್ರ ಆತ್ಮಹತ್ಯೆಯ ಹಿಂದಿನ ಕಾರಣವೂ ಇಂದು ಬಯಲಾಗಲೇಬೇಕು. ಸಾಂತ್ವನದ ಮಾತುಗಳಿಂದ ಸತ್ಯ ಬಚ್ಚಿಡುವ ಪ್ರಯತ್ನ ಮಾಡಬೇಡಿ. ಪ್ರತಿಯೊಂದಕ್ಕೂ ಅರಚಿ ಕಿರಚಿ ಸುದ್ದಿ ಮಾಡುವ ಹಾಗೂ 'ಪಿಟೀಲು' ಕುಯ್ಯುವ ಬಿಜೆಪಿಯ ಮಹಾಮಹಿಮ ನಾಯಕರು ವೈದ್ಯ ನಾಗೇಂದ್ರ ಆತ್ಮಹತ್ಯೆಯ ನೈಜ ಕಾರಣವೇನೆಂದು ಜನರ ಮುಂದೆ ಬಾಯಿ ಬಿಡಲಿ ಎಂದು ಆಗ್ರಹಿಸಿದ್ದಾರೆ.

ದಿನೇಶ್ ಗುಂಡೂರಾವ್ ಟ್ವೀಟ್

ಬಿಜೆಪಿ ಸರ್ಕಾರದಲ್ಲಿ ಮುಕ್ತವಾಗಿ ಕೆಲಸ ಮಾಡದ ವಾತಾವರಣ ಸೃಷ್ಟಿಯಾಗಿದೆ. ಎಸ್​ಐ ಕಿರಣ್ ಆತ್ಮಹತ್ಯೆ ಕಹಿ ಘಟನೆ ಮರೆಯುವ ಮುನ್ನವೇ ನಂಜನಗೂಡು ವೈದ್ಯಾಧಿಕಾರಿ ನಾಗೇಂದ್ರ ಸಾವಿನ ಹಾದಿ ತುಳಿದಿದ್ದಾರೆ. ಪ್ರತಿಯೊಂದು ಸಾವಿಗೂ ರಾಜಕೀಯ ಬಣ್ಣ ಕಟ್ಟುತ್ತಿದ್ದ ರಾಜ್ಯ ಬಿಜೆಪಿ ನಾಯಕರೇ ಈ ಇಬ್ಬರ ಸಾವಿನ ಬಗ್ಗೆ ನಿಮ್ಮ ದಿವ್ಯ ಮೌನದ ಹಿಂದಿನ ರಹಸ್ಯವೇನು? ಎಂದು ಕೇಳಿದ್ದಾರೆ.

ಐಎಎಸ್ ಅಧಿಕಾರಿ ಡಿ.ಕೆ. ರವಿ ಆತ್ಮಹತ್ಯೆ ಪ್ರಕರಣವನ್ನು ಕಾಂಗ್ರೆಸ್ ತಲೆಗೆ ಕಟ್ಟಿ ಹಾದಿರಂಪ ಮಾಡಿದ್ರಿ. ಪೊಲೀಸ್ ಅಧಿಕಾರಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲೂ ನಮ್ಮ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ್ರಿ. ಅಂದು ನಮ್ಮ ಸರ್ಕಾರ ಈ ಎರಡೂ ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಳಪಡಿಸಿತ್ತು. ತನಿಖೆಯ ನಂತರ ಸತ್ಯ ಏನೆಂದು ಗೊತ್ತಾಯಿತ್ತಲ್ಲವೇ? ಎಂದಿದ್ದಾರೆ.

ಮುಗ್ದ ಜನರ ಹಾದಿ ತಪ್ಪಿಸಿದ್ದಿರಿ:

ಹಿಂದೆ ನಮ್ಮ ಪಕ್ಷ ಆಡಳಿತದಲ್ಲಿದ್ದಾಗ ಕೆಲ ಅಧಿಕಾರಿಗಳು ವೈಯಕ್ತಿಕ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಂಡರೂ ಅದನ್ನು ಸರ್ಕಾರದ ತಲೆಗೆ ಕಟ್ಟಿ ಮುಗ್ದ ಜನರನ್ನು ಹಾದಿ ತಪ್ಪಿಸಿದ್ದೀರಿ. ಈಗ ನಿಮ್ಮದೇ ಸರ್ಕಾರದ ಅಮಾಯಕ ನೌಕರರು ಒತ್ತಡದ ಕಾರಣ ಹೇಳಿ ಸರಣಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಬಿಜೆಪಿ ನಾಯಕರೇ ಈ ಸಾವುಗಳಿಗೆ ನ್ಯಾಯ ಕೊಡಿಸುವರು ಯಾರು? ಎಂದು ಕೇಳಿದ್ದಾರೆ.

ABOUT THE AUTHOR

...view details