ಬೆಂಗಳೂರು :ಸಿದ್ದರಾಮಯ್ಯ ಮಾತನಾಡಿದ ವಿಡಿಯೋವನ್ನ ಯಾರು ಮಾಡಿದರು ಅನ್ನೋದು ಬಹಳ ಮುಖ್ಯ. ಕುಳಿತು ಮಾತಾಡಿದ್ದನ್ನು ವಿಡಿಯೋ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಸಿದ್ದರಾಮಯ್ಯ ನಮ್ಮ ಪಕ್ಷದ ಪ್ರಭಾವಿ ಮುಖಂಡ. ಹಾಗೆಯೇ ಡಿ.ಕೆ. ಶಿವಕುಮಾರ ಕೂಡ ನಮ್ಮ ಪಕ್ಷದ ಮುಖಂಡರು. ಕಾಂಗ್ರೆಸ್ ನಾಯಕರನ್ನ ಒಗ್ಗೂಡದಂತೆ ಮಾಡುವುದಕ್ಕಾಗಿ ಇಂತಹ ಕೆಲಸಗಳು ನಡೆಯುತ್ತಿರುತ್ತೆ. ಆಂತರಿಕ ಚರ್ಚೆಗಳು ಆಂತರಿಕವಾಗಿಯೇ ಇರಬೇಕು. ಅದು ರಾಜಕೀಯ ಲೆಕ್ಕಾಚಾರಗಳು. ಮಾಧ್ಯಮಗಳಲ್ಲಿ ಜಾತಿ ಲೆಕ್ಕಾಚಾರಗಳ ಬಗ್ಗೆ ಚರ್ಚೆ ಆಗಲ್ವಾ ? ಹಾಗೆಯೇ ರಾಜಕಾರಣದಲ್ಲಿ ಜಾತಿಯ ಲೆಕ್ಕಾಚಾರ ಇರುತ್ತೆ. ಆ ಬಗ್ಗೆ ಚರ್ಚೆ ಮಾಡಿದ್ದಾರೆ ಎಂದರು.