ಸಿನಿಮಾದ ಕೆಲವು ಸೆಲೆಬ್ರಿಟಿಗಳು ಜನರ ಮಧ್ಯೆ ಸಾಮಾನ್ಯರಂತೆ ಇರಲು ಸಿಕ್ಕಾಪಟ್ಟೆ ಇಷ್ಟ ಪಡ್ತಾರೆ.ಆದರೆ, ಆ ವೇಳೆ ಅಭಿಮಾನಿಗಳು ಮುಗಿ ಬಿದ್ದು ನೆಚ್ಚಿನ ನಟ ಅಥವಾ ನಟಿಯ ಜೊತೆ ಫೋಟೋಗೆ ಮುಗಿ ಬಿಳ್ತಾರೆ. ಈ ಕಿರಿ ಕಿರಿಯನ್ನ ತಪ್ಪಿಸಿಕೊಳ್ಳಲು ಸಿನಿಮಾ ನಟರು ತಮ್ಮದೇ ಹಾದಿ ಕಂಡುಕೊಂಡಿದ್ದಾರೆ.
ಸ್ಯಾಂಡಲ್ವುಡ್ ಹೀರೋಯಿನ್ ರಚಿತಾ ರಾಮ್ ಸದಾ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುತ್ತಾರೆ. ಈಗ ಮುಖಕ್ಕೆ ಕಪ್ಪು ಬಟ್ಟೆ ಕಟ್ಟಿಕೊಂಡು ಗಾಂಧಿ ಬಜಾರ್ ಸೇರಿದಂತೆ ಹಲವು ಕಡೆ ಮಾರುವೇಷದಲ್ಲಿ ಓಡಾಡಿದ್ದಾರೆ. ರಚಿತಾ ರಾಮ್ ಮೂಲತಃ ಆಂಜನೇಯ ಸ್ವಾಮಿಯ ಭಕ್ತೆ. ಹೀಗಾಗಿ ಸ್ನೇಹಿತ ಹಾಗು ನಿರ್ದೇಶಕರಾದ ಮಯೂರ್ ರಾಘವೇಂದ್ರ ಜೊತೆಗೆ ಬೆಂಗಳೂರಿನಲ್ಲಿನ ಆಂಜನೇಯನ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಈ ಹಿಂದೆ ಸಿನಿಮಾ ಒಂದಕ್ಕೆ ಕಾಸ್ಟೂಮ್ ಖರೀದಿಸಲು ಇದೇ ರೀತಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ನಲ್ಲಿ ನಲ್ಲಿ ಓಡಾಡಿದ್ದರು.