ಬೆಂಗಳೂರು :ನಗರದಲ್ಲಿ ಹಳೆಯ ಹಾಗೂ ಕಳಪೆ ಕಟ್ಟಡಗಳು ಕುಸಿಯುತ್ತಿರುವ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹದಿನೈದು ದಿನದಲ್ಲಿ ಎಲ್ಲಾ ಎಂಟು ವಲಯಗಳ ಶಿಥಿಲ ಕಟ್ಟಡಗಳನ್ನು ಸರ್ವೆ ಮಾಡುವಂತೆ ಕಂದಾಯ ಸಚಿವರು ಹಾಗೂ ಮುಖ್ಯ ಆಯುಕ್ತರು ಸಭೆ ನಡೆಸಿ, ವಲಯ ಆಯುಕ್ತರಿಗೆ ಆದೇಶಿಸಿದ್ದರು. ಇದರ ಪ್ರಾಥಮಿಕ ಸರ್ವೆ ವರದಿ ಸಲ್ಲಿಕೆಯಾಗಿದೆ. ನಗರದಲ್ಲಿ ಒಟ್ಟು 404 ಕಟ್ಟಡಗಳು ಅಪಾಯದಲ್ಲಿವೆ ಎಂಬುದು ಬಹಿರಂಗವಾಗಿದೆ.
2019ರಲ್ಲಿ ನಡೆಸಿದ್ದ ಸರ್ವೆಯಲ್ಲಿ 185 ಕಟ್ಟಡಗಳು ಶಿಥಿಲಗೊಂಡಿದ್ದು ವರದಿಯಾಗಿತ್ತು. ಇದೀಗ ಪ್ರಾಥಮಿಕ ಸರ್ವೆಯಲ್ಲಿ ಇಷ್ಟು ಕಟ್ಟಡಗಳನ್ನು ಗುರುತಿಸಲಾಗಿದೆ. ಆ ಕಟ್ಟಡಗಳ ಸದೃಢತೆ ಬಗ್ಗೆ ಕೂಲಂಕಷ ಪರೀಕ್ಷೆ ನಡೆಸುವುದು ಇನ್ನೂ ಬಾಕಿ ಇದೆ ಏಂದು ಸರ್ವೆ ನಡೆಸಿದ ಇಂಜಿನಿಯರ್ ಒಬ್ಬರು ತಿಳಿಸಿದ್ದಾರೆ.