ಬೆಂಗಳೂರು: ರಮಾಡ ರೆಸಾರ್ಟ್ನಲ್ಲಿರುವ ಮಧ್ಯಪ್ರದೇಶದ ಬಂಡಾಯ ಶಾಸಕರನ್ನು ಭೇಟಿ ಮಾಡಲು ಅವಕಾಶ ನೀಡುವಂತೆ ಕಮಿಷನರ್ ಅನುಮತಿ ಕೇಳಲು ಕಾಂಗ್ರೆಸ್ ನಿಯೋಗ ಕಮಿಷನರ್ ಕಚೇರಿಗೆ ಆಗಮಿಸಿದೆ.
ಕಮಿಷನರ್ ಭೇಟಿ ಮಾಡಿದ ದಿಗ್ವಿಜಯ್ ಸಿಂಗ್ ಅಂಡ್ ಟೀಮ್ - ರಮಾಡ ರೆಸಾರ್ಟ್ನಲ್ಲಿರುವ ಮಧ್ಯಪ್ರದೇಶದ ಬಂಡಾಯ ಶಾಸಕರು
ಮಧ್ಯಪ್ರದೇಶದ ಬಂಡಾಯ ಶಾಸಕರನ್ನು ಭೇಟಿ ಮಾಡಲು ಅನುಮತಿ ಕೋರಿ ಕಾಂಗ್ರೆಸ್ ನಾಯಕರು ಕಮಿಷನರ್ ಕಚೇರಿಗೆ ಆಗಮಿಸಿದ್ದಾರೆ.
ಕಮಿಷನರ್ ಭೇಟಿ ಮಾಡಿದ ದಿಗ್ವಿಜಯ್ ಸಿಂಗ್ ಅಂಡ್ ಟೀಮ್
ಆದರೆ ಕಮಿಷನರ್ ಭೇಟಿಗೆ ಡಿ.ಕೆ. ಶಿವಕುಮಾರ್,ದಿಗ್ವಿಜಯ್ ಸಿಂಗ್, ರಿಜ್ವಾನ್ ಅರ್ಷದ್, ನಲ್ಪಾಡ್ ಹಾಗೂ ಶಾಸಕ ಹ್ಯಾರಿಸ್ ಗೆ ಮಾತ್ರ ಅವಕಾಶ ನೀಡಲಾಯ್ತು. ಇನ್ನು ಈ ವೇಳೆ ಕಮಿಷನರ್ ಕಚೇರಿ ಎದುರು ಕಾರ್ಯಕರ್ತರು ಜಮಾಯಿಸಿ ನೂಕುನುಗ್ಗಲು ಉಂಟಾಯ್ತು.
ಮಧ್ಯಪ್ರದೇಶ ಸರ್ಕಾರದ ಅಸ್ಥಿರತೆಗೆ ಕಾರಣರಾಗಿರುವ ಮಧ್ಯಪ್ರದೇಶ ಕಾಂಗ್ರೆಸ್ನ ರೆಬೆಲ್ ಶಾಸಕರು ಯಲಹಂಕಾದ ರಮಾಡ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದು,ಅವರನ್ನು ಕಾಂಗ್ರೆಸ್ ನಾಯಕರು ಭೇಟಿ ಮಾಡಲು ಅವಕಾಶ ಕೋರಿ ಕಮಿಷನರ್ ಕಚೇರಿಗೆ ತೆರಳಿದ್ದಾರೆ.