ದೇವನಹಳ್ಳಿ(ಬೆಂಗಳೂರು): ಮುಖವೇ ಬೋರ್ಡಿಂಗ್ ಪಾಸ್ನಂತೆ ಬಳಸುವ ಹೊಸ ವ್ಯವಸ್ಥೆ ಇಂದಿನಿಂದ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿಂದ ದೇಶದ ಮೂರು ಏರ್ ಪೋರ್ಟ್ಗಳಲ್ಲಿ ಜಾರಿಯಾಗಿದೆ. ನೂತನ ತಂತ್ರಜ್ಞಾನದಿಂದ ಕಾಗದ ರಹಿತ, ತಡೆ ರಹಿತ ಸುಗಮಬವಾಗಿ ಪ್ರಯಾಣಿಸಬಹುದಾಗಿದೆ.
ಮುಖಚಹರೆಯನ್ನೇ ಬಯೋಮೆಟ್ರಿಕ್ ಗುರುತಾಗಿ ಬಳಸಿಕೊಳ್ಳಲು ಅಧಿಕೃತವಾಗಿ ಡಿಜಿಯಾತ್ರಾವನ್ನ ಕೇಂದ್ರ ಸರ್ಕಾರ ಆರಂಭಿಸಿದೆ, ದೆಹಲಿ ವಿಮಾನ ನಿಲ್ದಾಣದಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ‘ಡಿಜಿಯಾತ್ರಾ’ ಅನಾವರಣಗೊಳಿಸಿದರು.
ಪ್ರಯಾಣಿಕರು ಮೊದಲು ಡಿಜಿಯಾತ್ರಾ ಮೊಬೈಲ್ ಅಪ್ಲಿಕೇಷನ್ ಬಳಸಿಕೊಂಡು ಆಧಾರ್ ಸಂಖ್ಯೆ ಮತ್ತು ಸೆಲ್ಪಿ ಪೋಟೋವನ್ನು ನೊಂದಾಯಿಸಬೇಕು, ಬಳಿಕ ವಿಮಾನಯಾನ ಸಚಿವಾಲಯದ ವೆಬ್ಸೈಟ್ನಲ್ಲಿ ಗುರುತಿನ ದಾಖಲೆಯನ್ನು ನೀಡಿ ನೋಂದಾಯಿಸಿಕೊಳ್ಳಬೇಕು.
ಮುಖಚಹರೆಯೇ ಬೋರ್ಡಿಂಗ್ ಪಾಸ್ : ಮೊದಲ ಬಾರಿಗೆ ಏರ್ಪೋರ್ಟ್ಗೆ ಬಂದಾಗ ಮುಖ ಚಹರೆ ಸಂಗ್ರಹಿಸಲಾಗುತ್ತದೆ, ಬಳಿಕ ಯಾವುದೇ ಸಮಯದಲ್ಲಿ ಪ್ರಯಾಣಿಸಲು ಏರ್ಪೋರ್ಟ್ಗೆ ಬಂದಾಗ ಮುಖಚಹರೆಯೇ ಬೋರ್ಡಿಂಗ್ ಪಾಸ್ ಆಗುತ್ತದೆ.