ಬೆಂಗಳೂರು: ಹಳೆ ಏರ್‌ಪೊರ್ಟ್ ರಸ್ತೆಯ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟ ದಿಗಂತ್ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು ಸಂಜೆ 7ರ ಸುಮಾರಿಗೆ ಡಿಸ್ಚಾರ್ಜ್ ಆಗಿದ್ದಾರೆ. ನಿನ್ನೆ ಮಧ್ಯಾಹ್ನ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆರೋಗ್ಯದಲ್ಲಿ ಚೇತರಿಕೆ: ಆಸ್ಪತ್ರೆಯಿಂದ ನಟ ದಿಗಂತ್ ಡಿಸ್ಚಾರ್ಜ್ - ದಿಗಂತ್ರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ
ಗೋವಾದ ಕಡಲ ತೀರದಲ್ಲಿ ಸಮ್ಮರ್ ಸಾಲ್ಟ್ ಜಂಪ್ ಮಾಡಲು ಹೋಗಿ ನಟ ದಿಗಂತ್ ಕುತ್ತಿಗೆಗೆ ಗಾಯವಾಗಿತ್ತು. ಬಳಿಕ ಅಲ್ಲಿಂದ ಏರ್ ಲಿಫ್ಟ್ ಮಾಡಿ ಬೆಂಗಳೂರಿಗೆ ಕರೆತಂದು ಚಿಕಿತ್ಸೆ ಕೊಡಿಸಲಾಗಿತ್ತು.
ಆರೋಗ್ಯದಲ್ಲಿ ಚೇತರಿಕೆ ಕಂಡ ಹಿನ್ನೆಲೆ ದಿಗಂತ್ ಆಸ್ಪತ್ರೆಯಿಂದ ಡಿಸ್ಚಾರ್ಜ್
ಗೋವಾದ ಕಡಲತೀರದಲ್ಲಿ ಸಮ್ಮರ್ ಸಾಲ್ಟ್ ಜಂಪ್ ಮಾಡಲು ಹೋಗಿ ದಿಗಂತ್ ಕುತ್ತಿಗೆಗೆ ಗಾಯವಾಗಿತ್ತು. ಬಳಿಕ ಅಲ್ಲಿಂದ ಏರ್‌ಲಿಫ್ಟ್ ಮಾಡಿ ಬೆಂಗಳೂರಿಗೆ ಕರೆತರಲಾಗಿತ್ತು. ಮೂರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆದಿದ್ದು, ಮುಂದಿನ ಮೂರು ತಿಂಗಳು ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.