ಬೆಂಗಳೂರು : ಅಣ್ಣಾಮಲೈ ರಾಜೀನಾಮೆ ನೀಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಡಿಐಜಿ ರೂಪಾ ಅವರು, ಅವರ ಮುಂದಿನ ಕೆಲಸಗಳಿಗೆ ಟ್ವೀಟ್ ಮೂಲಕ ಆಲ್ ದಿ ಬೆಸ್ಟ್ ಹೇಳಿದ್ದಾರೆ.
IPS ಹುದ್ದೆಗೆ ರಿಸೈನ್ ಮಾಡಲು ಗಟ್ಸ್ ಬೇಕು.. ಅಣ್ಣಾಮಲೈ ರಾಜಕೀಯ ಜರ್ನಿಗೆ ಆಲ್ ದಿ ಬೆಸ್ಟ್ ಎಂದ ಡಿ.ರೂಪಾ - undefined
ಅಣ್ಣಾಮಲೈ ರಾಜೀನಾಮೆಗೆ ಬೇಸರ ವ್ಯಕ್ತಪಡಿಸಿದ ಡಿಐಜಿ ರೂಪ ಅವರು, ಅವರ ಮುಂದಿನ ಕಾರ್ಯಗಳಿಗೆ ಟ್ವೀಟ್ ಮೂಲಕ ಆಲ್ ದಿ ಬೆಸ್ಟ್ ಹೇಳಿದ್ದಾರೆ.
ಈಗಾಗಲೇ ಅಣ್ಣಾಮಲೈ ಜೊತೆ ಮಾತಾನಾಡಿದ್ದೇನೆ, ಇದು ಪೂರ್ವ ನಿರ್ಧಾರಿತ ರಾಜೀನಾಮೆ. ಇವತ್ತು ಅಣ್ಣಾಮಲೈ ರಾಜೀನಾಮೆ ನೀಡಲು ಒಲವು ವ್ಯಕ್ತಪಡಿಸಿದ್ದಾರೆ. ಅವರು ಮುಂದೆ ರಾಜಕೀಯಲ್ಲಿ ಶ್ರಮಿಸಿಲು ನಿರ್ಧರಿಸಿದ್ದಾರೆ. ಶ್ರಮಪಟ್ಟು ಹಗಲಿರುವ ಓದಿ ಸಂಪಾದಿಸಿರುವ ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡೋದು ಸುಲಭವಲ್ಲ.
ಅಂತಹ ನಿರ್ಧಾರ ಕೈಗೊಳ್ಳಲು ನಿಜಕ್ಕೂ ಎದೆಗಾರಿಕೆ ಬೇಕು. ಜೀವನ ಭದ್ರತೆಯಿರುವ ಹುದ್ದೆ ತ್ಯಜಿಸಬೇಕು ಅಂದ್ರೇ ದೃಢತೆಬೇಕು.ಅವರ ಸಾಧನೆ ಜನರ ಮನಸ್ಸಿನಲ್ಲಿದೆ. ಇಂತಹ ಸಾಧಕರು ಮತ್ತು ಯುವಕರು ಪೊಲೀಸ್ ಇಲಾಖೆ ಬಿಟ್ಟು ರಾಜಕೀಯಕ್ಕೆ ಧುಮುಕ್ಕುತ್ತಿರುವುದು ನೋವಿನ ಸಂಗತಿ. ಆದರೆ, ಅವರ ಮುಂದಿನ ರಾಜಕೀಯ ಜರ್ನಿಗೆ ಒಳ್ಳೇಯದಾಗಲಿ. ಆಲ್ ದಿ ಬೆಸ್ಟ್ ಅಂತಾ ತಮ್ಮ ಟ್ವಿಟರ್ ಮೂಲಕ ಡಿಐಜಿ ಡಿ. ರೂಪಾ, ಅಣ್ಣಾಮಲೈ ಅವರಿಗೆ ಹಾರೈಸಿದ್ದಾರೆ.