ಕರ್ನಾಟಕ

karnataka

ETV Bharat / state

ಬಹು ಅಂಗಾಂಗ ವೈಫಲ್ಯ... DIG ಆರ್. ರಮೇಶ್ ವಿಧಿವಶ - IPS officer R Ramesh died

ಐಪಿಎಸ್ ಅಧಿಕಾರಿ ‌DIG ಆರ್. ರಮೇಶ್ ಅವರಿಂದು ಬೆಳಿಗ್ಗೆ ಬಹು ಅಂಗಾಂಗ ವೈಫಲ್ಯದಿಂದ ನಗರದ ಬಿಜಿಎಸ್​ನಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

DIG ಆರ್. ರಮೇಶ್ ನಿಧನ

By

Published : Aug 26, 2019, 1:44 PM IST

ಬೆಂಗಳೂರು: ಬಹು ಅಂಗಾಂಗ ವೈಫಲ್ಯಕ್ಕೆ ನಗರದ ಬಿಜಿಎಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಐಪಿಎಸ್ ಅಧಿಕಾರಿ ‌DIG ಆರ್. ರಮೇಶ್ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

ಕಳೆದ 15 ದಿನಗಳಿಂದ ಬಹು ಅಂಗಾಗ‌ ವೈಫಲ್ಯಕ್ಕೆ ಕಾಯಿಲೆಯಿಂದ ಬಳಲುತ್ತಿದ್ದ ಆರ್. ರಮೇಶ್ ರನ್ನ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಇಂದು ಬೆಳಗ್ಗೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಈ ಹಿಂದೆ ಹಲವು ವಿಭಾಗಗಳಲ್ಲಿ ಕೆಲಸ ಮಾಡಿದ ಹೆಗ್ಗಳಿಕೆ ಅವರಿಗಿದೆ.

DIGP P&M ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರಮೇಶ್ 2018 ರಲ್ಲಿ ಹೋಮ್ ಗಾರ್ಡ್ಸ್ ಹಾಗೂ ಸಿವಿಲ್ ಡಿಫೆನ್ಸ್ ನಲ್ಲಿ DIG ಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. 2017 ರಲ್ಲಿ ಹೋಮ್ ಗಾರ್ಡ್ಸ್ ಹಾಗೂ ಸಿವಿಲ್ ಡಿಫೆನ್ಸ್, 2016 ರಲ್ಲಿ ಕ್ರೈಂ‌ವಿಭಾಗದ ಡಿಸಿಪಿ, 2013-15 ರಲ್ಲಿ DCP CAR ನಲ್ಲಿ ಕಾರ್ಯ. 2011-13 ರಲ್ಲಿ ಇಂಟಲಿಜೆನ್ಸ್ ವಿಭಾಗದ ಎಸ್ ಪಿಯಾಗಿದ್ದರು. 2011 ರಲ್ಲಿ ಉತ್ತರ ಕನ್ನಡ ಜಿಲ್ಲೆ ಎಸ್ ಪಿ ಆಗಿ ಕರ್ತವ್ಯ ನಿರ್ವಹಿಸಿದ್ದರು.

DIG ಆರ್. ರಮೇಶ್ ನಿಧನ

2010-11 ರಲ್ಲಿ ಮಂಗಳೂರಿನ ಡಿಸಿಪಿ. 2009-10 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಅಡಿಷನಲ್​ ಎಸ್ ಪಿ. 2008-09 ರಲ್ಲಿ ಮೈಸೂರು ಜಿಲ್ಲೆಯ ಅಡಿಷನಲ್ ಎಸ್ ಪಿ. 2006-08 ರಲ್ಲಿ ರಾಜ್ಯ ಗುಪ್ತಚರ ಇಲಾಖೆಯ ಎಸ್ಪಿಯಾಗಿದ್ದರು. 2003-06 ರಲ್ಲಿ ವಿಧಾನಸೌಧದ ಡಿಸಿಪಿ. 2003 ರಲ್ಲಿ ಹೊಳೆನರಸೀಪುರ ಹಾಸನ ಜಿಲ್ಲೆಗೆ ಡಿವೈಎಸ್ಪಿ, 2000-01 ರಲ್ಲಿ ಕೋಲಾರ ಚಿಂತಾಮಣಿಗೆ ಡಿವೈಎಸ್ಪಿ, 2000 ರಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಡಿವೈಎಸ್ ಪಿ. 1999-2000 ರಲ್ಲಿ ಉಡುಪಿ ಜಿಲ್ಲೆ ಕಾರ್ಕಳದಲ್ಲೂ ಡಿವೈಎಸ್ ಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಈ ವೇಳೆ ಹಲವು ಬದಲಾವಣೆಗಳನ್ನು ತಂದಿದ್ದರು. ಇನ್ನು ರಮೇಶ್​ ಅವರ ನಿಧನಕ್ಕೆ ಐಪಿಎಸ್ ಅಧಿಕಾರಿಗಳು ಕಂಬನಿ‌ ಮಿಡಿದಿದ್ದಾರೆ.

ABOUT THE AUTHOR

...view details