ಕರ್ನಾಟಕ

karnataka

ETV Bharat / state

ಎಲ್ಲವೂ ಮೋದಿಮಯ... ಅಭಿಮಾನಿಯ ವಿಭಿನ್ನ ಪ್ರಚಾರ! - undefined

ಈಗಾಗಲೇ ಮೈಸೂರು, ಮಂಡ್ಯ ಸೇರಿದಂತೆ ಪ್ರಚಾರದಲ್ಲಿ ತೊಡಗಿಸಿದ್ದೇನೆ.‌ ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕಕ್ಕೂ ಹೋಗುತ್ತೇನೆ. ನನ್ನ ವೈಯಕ್ತಿಕ ಖರ್ಚಿನಲ್ಲೇ ಕಾರಿಗೆ ಪೆಟ್ರೋಲ್ ಹಾಕಿಸಿದ್ದೇನೆ. ಮೋದಿಗಾಗಿ ನನ್ನ ಪ್ರಾಣವನ್ನೇ ಕೊಡುತ್ತೇನೆ ಎನ್ನುತ್ತಾರೆ ಅಶೋಕ್.

ಎಲ್ಲವೂ ಮೋದಿಮಯ

By

Published : Apr 13, 2019, 9:52 PM IST

ಬೆಂಗಳೂರು: ಸ್ವಂತ ಖರ್ಚಿನಲ್ಲೇ ರಾಜ್ಯದೆಲ್ಲೆಡೆ ತಮ್ಮ ಕಾರಿನ ಮೂಲಕ ಬಿಜೆಪಿ ಪರ ಪ್ರಚಾರ ನಡೆಸುತ್ತಿದ್ದಾರೆ ಇಲ್ಲೋರ್ವ ಮೋದಿಯ ವಿಶಿಷ್ಟ ಅಭಿಮಾನಿ.

ಮೋದಿಗಾಗಿ ತನ್ನ ಆಲ್ಟೋ ಕಾರಿಗೆ ಕೇಸರಿ ಬಣ್ಣ ಬಳೆದು, ಮೋದಿ ಕಟೌಟ್​​ ಹಾಕಿಕೊಂಡು ಮೋದಿಗಾಗಿ ವೋಟ್ ಕೊಡಿ ಅಂತ ಮನವಿ ಮಾಡುತ್ತಿದ್ದಾನೆ ಕೊರಟಗೆರೆಯ ಅಶೋಕ್.

ತನ್ನ ವೈಯಕ್ತಿಕ ಹಣದಿಂದ ತನ್ನ ಕಾರನ್ನು ಬಿಜೆಪಿಮಯ ಮಾಡಿದ್ದು, ಮೋದಿಯ ಗೆಲುವಿಗಾಗಿ ತನ್ನದೇ ಆದ ರೀತಿಯಲ್ಲಿ ಶ್ರಮಿಸುತ್ತಿದ್ದಾನೆ. ಇನ್ನು ಕಾರಿನ ಬಳಿ ಬರುವ ಸಾರ್ವಜನಿಕರು ಕಾರ್​ ಮುಂದೆ ನಿಂತು ಸೆಲ್ಫಿಗೆ ಪೋಸ್​ ಕೊಡುತ್ತಿದ್ದಾರೆ.

ಎಲ್ಲವೂ ಮೋದಿಮಯ

ಇಷ್ಟೇ ಅಲ್ಲದೆ, ವೋಟ್ ಫಾರ್ ಮೋದಿ ಎಂದು ಹೇರ್ ಸ್ಟೈಲ್ ಕೂಡ ಮಾಡಿಸಿಕೊಂಡಿದ್ದಾನೆ. ಮೋದಿ ಅವರು ಮಾಡುತ್ತಿರುವ ಕೆಲಸ ನನಗೆ ಇಷ್ಟವಾಗಿದೆ. ಹೀಗಾಗಿ ಮೋದಿಯನ್ನು ಬೆಂಬಲಿಸುವುಲ್ಲದೆ ಬಿಜೆಪಿ ಪ್ರಚಾರ ಕಾರ್ಯ ಎಲ್ಲಿ ನಡೆಯುತ್ತೆ ಅಲ್ಲಿಗೆ ಹೋಗಿ ಪ್ರಚಾರ ಕಾರ್ಯ ನಡೆಸುತ್ತಿದ್ದೇನೆ. ಈಗಾಗಲೇ ಮೈಸೂರು, ಮಂಡ್ಯ ಸೇರಿದಂತೆ ಹಲವೆಡೆ ಪ್ರಚಾರದಲ್ಲಿ ತೊಡಗಿಸಿದ್ದೇನೆ.‌ ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕಕ್ಕೂ ಹೋಗುತ್ತೇನೆ. ನನ್ನ ವೈಯಕ್ತಿಕ ಖರ್ಚಿನಲ್ಲೇ ಕಾರಿಗೆ ಪೆಟ್ರೋಲ್ ಹಾಕಿಸಿದ್ದೇನೆ. ಮೋದಿಗಾಗಿ ನನ್ನ ಪ್ರಾಣವನ್ನೇ ಕೊಡುತ್ತೇನೆ ಎನ್ನುತ್ತಾರೆ ಅಶೋಕ್.

For All Latest Updates

TAGGED:

ABOUT THE AUTHOR

...view details