ಬೆಂಗಳೂರು: ಅವರು ಕೊಲ್ಕತ್ತಾ ಮೂಲದ ದಂಪತಿಗಳು. ಹದಿನೈದು ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಆ ಜೋಡಿ ನಗರದ ವೈಟ್ ಫೀಲ್ಡ್ ನ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ರು. ಅದ್ರೆ, ಕೆಲ ವರ್ಷಗಳಿಂದ ದಂಪತಿಗಳ ನಡುವೆ ಕಲಹ ಉಂಟಾಗಿ ಇಬ್ಬರು ದೂರವಾಗಿದ್ರು. ಇಬ್ಬರ ನಡುವಿನ ವೈಮನಸ್ಸು ಮೂವರ ಕೊಲೆಯಲ್ಲಿ ಅಂತ್ಯವಾಗಿದೆ.
ಅಮಿತ್ ಅಗರವಾಲ್ ನಗರದ ಗರುಡಾಚಾರಪಾಳ್ಯ ಬಳಿಯ ಅಪಾರ್ಟ್ಮೆಂಟ್ನಲ್ಲಿ ತನ್ನ ಪತ್ನಿ ಶಿಲ್ಪಿ ಅಗರವಾಲ್ (40) ಹತ್ಯೆ ಮಾಡಿದ್ದಾನೆ. ಬಳಿಕ ಕೊಲ್ಕತ್ತಾಗೆ ತೆರಳಿ ತನ್ನ ಅತ್ತೆ ಲಲಿತಾ ದಂದಾನಿಯಾ (70) ಅವರನ್ನ ಗುಂಡಿಟ್ಟು ಕೊಲೆ ಮಾಡಿ ಬಳಿಕ ತಾನು ಸಹ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಅಮಿತ್ ಅಗರವಾಲ್ 10 ವರ್ಷಗಳ ಹಿಂದೆ ಶಿಲ್ಪಿ ಅಗರವಾಲ್ ರೊಂದಿಗೆ ವಿವಾಹವಾಗಿದ್ದ. ಬಳಿಕ ನಗರದಲ್ಲಿ ಸಾಪ್ಟ್ ವೇರ್ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದು ಮಹದೇವಪುರದ ಅಪಾರ್ಟ್ಮೆಂಟ್ ನಲ್ಲಿ ದಂಪತಿಗಳಿಬ್ಬರು ನೆಲೆಸಿದ್ರು. ಈ ನಡುವೆ ಪತಿ ಪತ್ನಿ ಕೌಟುಂಬಿಕ ವಿಚಾರಕ್ಕೆ ಪದೇ ಪದೇ ಜಗಳವಾಡುತ್ತಿದ್ದರು ಎನ್ನಲಾಗಿದೆ.
ಹೆಂಡತಿ, ಅತ್ತೆಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ ಕಳೆದ ಶನಿವಾರ ಸಹ ಇಬ್ಬರ ನಡುವೆ ಜಗಳವಾಗಿದ್ದು, ಈ ವೇಳೆ ಅಮಿತ್ ಪತ್ನಿಯನ್ನ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಪತ್ನಿ ಕೊಲೆ ಬಳಿಕ ಕೊಲ್ಕತ್ತಾಗೆ ತೆರಳಿ ಅಲ್ಲಿ ತನ್ನ ಅತ್ತೆ ಮಾವನ ಜೊತೆ ಜಗಳವಾಡಿದ್ದು, ಆ ವೇಳೆ ಅತ್ತೆ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿ ಪರಾರಿಯಾಗಿದ್ದ. ಬಳಿಕ ತಾನು ಸಹ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಈ ಬಗ್ಗೆ ಕೊಲ್ಕತ್ತಾ ಪೊಲೀಸರು ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದರು. ಪೊಲೀಸರ ತನಿಖೆ ವೇಳೆ ಅಮಿತ್ ಅಗರವಾಲ್ ಬಳಿ ಡೆತ್ ನೋಟ್ ಪತ್ತೆಯಾಗಿದೆ. ಡೆತ್ ನೋಟ್ ನಲ್ಲಿ ಬೆಂಗಳೂರಿನಲ್ಲಿ ಪತ್ನಿಯನ್ನ ಕೊಲೆಗೈದಿರೋ ಬಗ್ಗೆ ಬರೆದಿದ್ದು, ಅದನ್ನ ಗಮನಿಸಿದ ಕೊಲ್ಕತ್ತಾ ಪೊಲೀಸರು ಕೂಡಲೇ ಬೆಂಗಳೂರು ಪೊಲೀಸರನ್ನ ಸಂಪರ್ಕಿಸಿ ಮಾಹಿತಿ ರವಾನಿಸಿದ್ದಾರೆ. ಟೆಕ್ಕಿ ಕುಟುಂಬ ವಾಸವಿದ್ದ ಅಪಾರ್ಟ್ಮೆಂಟ್ಗೆ ಮಹದೇವಪುರ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ ವೇಳೆ, ಮನೆಯ ಕಿಚನ್ನಲ್ಲಿ ಶಿಲ್ಪಿ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಮಹದೇವಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.