ಬೆಂಗಳೂರು:ಮೂರು ತಿಂಗಳ ಲಾಕ್ಡೌನ್ ಬಳಿಕ ಗ್ರಾಹಕರಿಗೆ ಸೇವೆ ಆರಂಭಿಸಿರುವ ಹೋಟೆಲ್ಗಳು ಗ್ರಾಹಕರಿಲ್ಲದೆ ಭಣಗುಡುತ್ತಿವೆ. ದರ್ಶಿನಿಗಳು, ಸಣ್ಣಪುಟ್ಟ ಹೋಟೆಲ್ಗಳು ತಿಂಗಳ ಬಾಡಿಗೆ, ಸಿಬ್ಬಂದಿ ವೇತನ ನೀಡಲು ಸಹ ಆಗದೆ ಪರದಾಡುವ ಸ್ಥಿತಿಗೆ ತಲುಪಿವೆ.
ಹೆಚ್ಚಿನ ಜನ ವರ್ಕ್ ಫ್ರಮ್ ಹೋಂ ಇರುವುದರಿಂದ ಹೊರಗೆ ಓಡಾಡುತ್ತಿಲ್ಲ. ಹಾಗಾಗಿ ದರ್ಶಿನಿ, ಹೋಟೆಲ್ಗಳಿಗೆ ಗ್ರಾಹಕರ ಕೊರತೆಯಾಗಿದೆ. ಇನ್ನೊಂದೆಡೆ ಜನ ಕೋವಿಡ್-19 ಭಯದಿಂದಲೂ ಹೋಟೆಲ್ ಆಹಾರ ತಿನ್ನುತ್ತಿಲ್ಲ. ಇದರಿಂದಾಗಿ ಲಾಕ್ಡೌನ್ ತೆರವಿನ ಬಳಿಕವೂ ಉದ್ಯಮ ನಷ್ಟದಲ್ಲಿ ಸಾಗುತ್ತಿದೆ. ಹಿಂದಿನ ಸ್ಥಿತಿಗೆ ಬರಲು ಇನ್ನೂ ನಾಲ್ಕೈದು ತಿಂಗಳು ಅಥವಾ ವರ್ಷವೇ ಬೇಕಾಗಬಹುದು ಎಂದು ಹೋಟೆಲ್ ಮಾಲೀಕರು ಹೇಳುತ್ತಿದ್ದಾರೆ.
ಕರ್ನಾಟಕ ರಾಜ್ಯ ಹೋಟೆಲ್ ಅಸೋಸಿಯೇಷನ್ ಕಾರ್ಯದರ್ಶಿ ಮಧುಕರ್ ಎಂ. ಶೆಟ್ಟಿ ಮಾತನಾಡಿ, ಸರ್ಕಾರ ಕೆಲವು ಗೈಡ್ ಲೈನ್ ಕೊಟ್ಟಿದ್ದು, ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುತ್ತಿದ್ದೇವೆ. ಎಲ್ಲಾ ಗ್ರಾಹಕರ ಟೆಂಪರೇಚರ್ ಚೆಕ್ ಮಾಡಿ ಸ್ಯಾನಿಟೈಸರ್ ನೀಡಲಾಗುತ್ತಿದೆ. ಹೋಟೆಲ್ ಉದ್ಯಮ ಟೂರಿಸಂ ಸೆಕ್ಟರ್, ಆರ್ಥಿಕತೆಗೆ ಹೆಚ್ಚಿನ ಕೊಡುಗೆ ನೀಡುತ್ತದೆ. ಸದ್ಯ ಸರ್ವೀಸ್ ಟೇಬಲ್ಗಳಲ್ಲಿ ಇನ್ನೂರು ಸೀಟ್ ಇದ್ದರೆ ನೂರಕ್ಕೆ ಇಳಿಕೆ ಮಾಡಿದ್ದೇವೆ. ಒಂದು ಟೇಬಲ್ನಲ್ಲಿ ಇಬ್ಬರಿಗೆ ಮಾತ್ರ ಕೂರಲು ಅವಕಾಶ ನೀಡಲಾಗಿದೆ ಎಂದರು.