ಬೆಂಗಳೂರು: ದೇಶದ್ರೋಹ ಆರೋಪಕ್ಕೆ ಗುರಿಯಾಗಿರುವ ಅಮೂಲ್ಯ ಘೋಷಣೆ ವಿಚಾರವಾಗಿ ಇಂದು ಮಾತನಾಡಿದ ಮಾಜಿ ಸಚಿವ ಡಿ. ಕೆ. ಶಿವಕುಮಾರ್, ಪರೋಕ್ಷವಾಗಿ ಆಕೆಯನ್ನು ಸಮರ್ಥಿಸಿಕೊಂಡಂತೆ ಕಂಡುಬಂತು.
ಪೂರ್ತಿ ಮಾತನಾಡಲು ಬಿಡಬೇಕಿತ್ತು... ಅಮೂಲ್ಯ ಸಮರ್ಥಿಸಿಕೊಂಡ್ರಾ ಡಿಕೆಶಿ?
ಅಮೂಲ್ಯ ಲಿಯೋನಿ ಘೋಷಣೆ ವಿಚಾರವಾಗಿ ಇಂದು ಮಾತನಾಡಿದ ಮಾಜಿ ಸಚಿವ ಡಿ. ಕೆ. ಶಿವಕುಮಾರ್, ಪರೋಕ್ಷವಾಗಿ ಆಕೆಯನ್ನು ಸಮರ್ಥಿಸಿಕೊಂಡತೆ ಕಂಡುಬಂತು.
ಇಂದು ಸದಾಶಿವನಗರ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಡಿಕೆಶಿ, ಆಕೆ ಘೋಷಣೆ ನಂತರ ಏನು ಹೇಳುವುದಕ್ಕೆ ಹೊರಟ್ಟಿದ್ದಳೋ ಏನೋ. ಈ ಹಿಂದೆ ಕೂಡ ನಾನು ಅವಳ ಮಾತು, ತತ್ವ, ನಡೆಯನ್ನು ಗಮನಿಸಿದ್ದೇನೆ. ಅಮೂಲ್ಯ ಅವಳದೇ ತತ್ವಗಳನ್ನಿಟ್ಟುಕೊಂಡಿರುವವಳು. ಆಕೆ ವಿಶ್ವಮಾನವ ತತ್ವ ಅನುಸರಿಸುವವಳು. ಆದರೆ, ಆಕೆ ಪಾಕಿಸ್ತಾನಕ್ಕೆ ಜೈಕಾರ ಹಾಕಿದರೆ ನಾನೂ ಕೂಡ ಅದಕ್ಕೆ ಪ್ರೋತ್ಸಾಹ ಕೊಡೋದಿಲ್ಲ. ಆಕೆ ಏನು ಹೇಳಲು ಹೊರಟಿದ್ದಳು ಎಂಬುದನ್ನು ಪೂರ್ತಿಯಾಗಿ ಕೇಳಬೇಕಿತ್ತು. ಧ್ವನಿ ಎತ್ತುವವರ ಧ್ವನಿ ಮೊಟಕುಗೊಳಿಸಬಾರದು ಎಂದರು.
ಅಧಿಕಾರ ಇರುವವರು ರಾಜಕಾರಣ ಮಾಡಬೇಕು. ಆದರೆ, ದೇಶದ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು. ಹರಿಬರಿ ಮಾಡಿ ಈಗಲೇ ಯಾವುದೇ ತೀರ್ಮಾನಕ್ಕೆ ಬರುವುದು ಬೇಡ ನೋಡೋಣ ಏನಾಗುತ್ತೆ ಅಂತ ಹೇಳಿದರು.