ಕರ್ನಾಟಕ

karnataka

ETV Bharat / state

ರೈತರ ಹೋರಾಟಕ್ಕೆ ದೇಶದ ಜನರು ಬೆಂಬಲಿಸುವಂತೆ ಹೆಚ್.ಎಸ್.ದೊರೆಸ್ವಾಮಿ‌ ಕರೆ - Dhoreswamy felicitated by Falcon Institute of Education

ಫಾಲ್ಕನ್ ಶಿಕ್ಷಣ ಸಂಸ್ಥೆ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ ಅವರನ್ನು ಸನ್ಮಾನಿಸಲಾಗಿದೆ.

Doreswamy
ದೊರೆಸ್ವಾಮಿ

By

Published : Jan 27, 2021, 9:42 AM IST

ಬೆಂಗಳೂರು: ರೈತರ ಹೋರಾಟಕ್ಕೆ ದೇಶದ ಜನರು ಬೆಂಬಲಿಸಬೇಕು ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ ಕರೆ ನೀಡಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿಗೆ ಸನ್ಮಾನ

ಫಾಲ್ಕನ್ ಶಿಕ್ಷಣ ಸಂಸ್ಥೆ ವತಿಯಿಂದ ದೊರೆಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರೈತರ ಹೋರಾಟ ನೋಡುತ್ತಿದ್ದರೆ ಬ್ರಿಟಿಷರ ಕಾಲದಲ್ಲಿ ನಡೆದ ದಬ್ಬಾಳಿಕೆ ನೆನಪಾಗುತ್ತಿದೆ. ರೈತರ ವಿರುದ್ಧದ ಮೂರು ಕೃಷಿ ಕಾನೂನನ್ನು ಕೇಂದ್ರ ಸರ್ಕಾರ ವಾಪಸ್​ ಪಡೆಯಬೇಕು ಎಂದು ಒತ್ತಾಯಿಸಿದರು.

ಈ ಕಾನೂನಿಂದ ಕೇವಲ ಇಬ್ಬರು ವ್ಯಕ್ತಿಗಳು ಮಾತ್ರ ಶ್ರೀಮಂತರಾಗುತ್ತಾರೆ. ಬಡತನ ಮತ್ತಷ್ಟು ಹೆಚ್ಚಲಿದೆ. ಹೀಗಾಗಿ, ಎಲ್ಲರೂ ಎಚ್ಚೆತ್ತುಕೊಂಡು ರೈತರ ಹೋರಾಟಕ್ಕೆ ಬೆಂಬಲ ಸೂಚಿಸಬೇಕು ಎಂದಿದ್ದಾರೆ. ‌

ABOUT THE AUTHOR

...view details