ಕರ್ನಾಟಕ

karnataka

ETV Bharat / state

ಉಪಸಭಾಪತಿ ಧರ್ಮೇಗೌಡರ ಸಾವು ನೋವುಂಟು ಮಾಡಿದೆ: ಹೆಚ್​ಡಿಡಿ ಭಾವುಕ - ಧರ್ಮೇಗೌಡರ ನಿಧ‌ನಕ್ಕೆ ಹೆಚ್​ಡಿಕೆ ಸಂತಾಪ

ಅವರು ಬಹಳ ಸೂಕ್ಷ್ಮ ಮನಸ್ಸಿನ ವ್ಯಕ್ತಿ. ಹೆಂಡತಿ, ಮಕ್ಕಳಿಗೆ ಅಂತಿಮವಾಗಿ ಕಾಗದ ಬರೆದು ನೋವಿನಿಂದ ಹೊರಟು ಹೋದರು ಎಂದು ಧರ್ಮೇಗೌಡರನ್ನು ನೆನೆದು ಗೌಡರು ಕಣ್ಣೀರು ಹಾಕಿದರು.

H D Devegowda
ಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ

By

Published : Dec 29, 2020, 3:51 PM IST

ಬೆಂಗಳೂರು: ಧರ್ಮೇಗೌಡರ ನಿಧ‌ನ ವೈಯಕ್ತಿಕವಾಗಿ ನನಗೆ ತುಂಬಾ ನೋವುಂಟು ಮಾಡಿದೆ. ನನ್ನ ಜೀವನದಲ್ಲಿ ಕಂಡ ಅತ್ಯಂತ ಘೋರವಾದ ಘಟನೆ ಇದು ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಭಾವುಕರಾಗಿ ನುಡಿದಿದ್ದಾರೆ.

ತಮ್ಮ ನಿವಾಸದಲ್ಲಿ ಇಂದು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಅವರ ತಂದೆ ಕಾಲದಿಂದ, 1972 ವಿರೋಧ ಪಕ್ಷದ ನಾಯಕ‌ನ ಸಮಯದಿಂದಲೇ ಆ ಕುಟುಂಬಕ್ಕೂ ನನಗೂ ಮರೆಯಲಾದ ಬಾಂಧವ್ಯ. ಪಂಚಾಯಿತಿ, ಬ್ಯಾಂಕ್ ಚುನಾವಣೆಯಿಂದ ಹಿಡಿದು ಶಾಸಕರಾಗಿ, ವಿರೋಧ ಪಕ್ಷದ ಸದಸ್ಯರಾಗಿ, ಎಮ್‌ಎಲ್​ಸಿಯಾಗಿ, ಉಪಸಭಾಪತಿಯಾಗಿ ನಮ್ಮ ಜೊತೆಗಿದ್ದರು. ಧರ್ಮೇಗೌಡರು ಅವರ ತಂದೆ ಹೆಸರನ್ನು ಉಳಿಸಿಕೊಂಡಿದ್ದರು ಎಂದು ಹೇಳಿದರು.

ಕೊನೆಯ ಘಟ್ಟದಲ್ಲಿ ನಡೆದ ಘಟನೆಗಳಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರು ಬಹಳ ಸೂಕ್ಷ್ಮ ಮನಸ್ಸಿನ ವ್ಯಕ್ತಿ. ಹೆಂಡತಿ ಮಕ್ಕಳಿಗೆ ಅಂತಿಮವಾಗಿ ಕಾಗದ ಬರೆದು ನೋವಿನಿಂದ ಹೊರಟಿದ್ದಾರೆ ಎಂದು ಧರ್ಮೇಗೌಡರನ್ನು ನೆನೆದು ಗೌಡರು ಕಣ್ಣೀರು ಹಾಕಿದರು.

ಈ ಘಟನೆ ಮರೆಯಲಾಗದ ನೋವು ತಂದಿದೆ. ವಿಧಾನ ಪರಿಷತ್ ಘಟನೆ ನಡೆಯುವ ದಿನ ಬೆಳಿಗ್ಗೆ ನನ್ನನ್ನು ಭೇಟಿಯಾಗಿದ್ದರು. ಅವರಿಗೆ ತುಂಬಾ ಸಲಹೆ ಕೊಟ್ಟಿದ್ದೆ. ಸಭಾಪತಿಯ ಸ್ಥಾನಕ್ಕೆ ನಿಮ್ಮನ್ನು ಕರೆದು ಕೂರುವ ಸನ್ನಿವೇಶ ಬಂದರೆ ಮಾತ್ರ ನೀವು ಹೋಗಿ ಕೂರಬೇಕು ಅಂತ ಹೇಳಿದ್ದೆ. ಯಾರೇ ಒತ್ತಡ ಹಾಕಿದರೂ ಕೂರಬಾರದು. ನಮಗೆ ಅದರ ಅವಶ್ಯಕತೆ ಇಲ್ಲ. ಈ‌ ತಿಕ್ಕಾಟದಲ್ಲಿ ನಾವು ಬಲಿಪಶು ಆಗಬಾರದು ಅಂತ ಹೇಳಿದ್ದೆ. ಅವತ್ತೇ ಕೊನೆಯ ಬಾರಿ ಅವರ ಜೊತೆ ಮಾತನಾಡಿದ್ದು. ಅವತ್ತು ಜೊತೆಗೆ ಕೂತು ಕಾಫಿ ಕುಡಿದಿದ್ದೆವು ಎಂದು ಬಾವುಕರಾದರು.

ಅಂತಿಮ ದರ್ಶನಕ್ಕೆ ಹೋಗುತ್ತೇನೆ. ಆದರೆ ಆರೋಗ್ಯದಲ್ಲಿ ಸ್ವಲ್ಪ ಏರುಪೇರಿದೆ. ನೋಡಿಕೊಂಡು ಹೋಗುತ್ತೇನೆ. ಈಗ ನಾನು ಯಾರನ್ನೂ ದೂರಲಿಕ್ಕೆ ಹೋಗುವುದಿಲ್ಲ. ಆದರೆ, ಅವತ್ತು ನಡೆದ ಘಟನೆಯಿಂದ ಮಾನಸಿಕವಾಗಿ ತುಂಬಾ ಕುಗ್ಗಿ ಹೋಗಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು.

ABOUT THE AUTHOR

...view details