ಕರ್ನಾಟಕ

karnataka

ETV Bharat / state

ಕೊರೊನಾ ಎಫೆಕ್ಟ್.. ಆನ್​​ಲೈನ್ ಪೊಲೀಸಿಂಗ್ ಮಾಡಿಕೊಂಡ ಪೊಲೀಸ್ ಇಲಾಖೆ..

ಇನ್ಮುಂದೆ ಪೊಲೀಸ್ ಬಹುತೇಕ ವೆರಿಫಿಕೇಷನ್​ಗಳು ಆನ್​​ಲೈನ್​​ನಲ್ಲಿ ನಡೆಯಲಿವೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ತಿಳಿಸಿದ್ದಾರೆ..

DGP  Praveen Sood tweet
ಪ್ರವೀಣ್ ಸೂದ್

By

Published : Jul 24, 2020, 7:22 PM IST

ಬೆಂಗಳೂರು :ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಾಕವಾಗಿ ಹರಡುತ್ತಿದ್ದು ರಾಜ್ಯ ಪೊಲೀಸ್ ಇಲಾಖೆಯ ಬಹುತೇಕ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲುತ್ತಿದೆ. ಆದ್ದರಿಂದ ಇನ್ಮುಂದೆ ಪೊಲೀಸ್ ಬಹುತೇಕ ವೆರಿಫಿಕೇಷನ್​ಗಳು ಆನ್​​ಲೈನ್​​ನಲ್ಲಿ ನಡೆಯಲಿವೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ತಿಳಿಸಿದ್ದಾರೆ.

ಸೇವಾ ಸಿಂಧು ವೆಬ್‌ಸೈಟ್ ಮೂಲಕ‌ ವಿದೇಶ ಪ್ರಯಾಣಕ್ಕೆ ವೀಸಾ ವೆರಿಫಿಕೇಷನ್, ಕೆಲಸದ ನಿಮಿತ್ತ, ಕಂಪನಿಗಳ ಪೊಲೀಸ್ ವೆರಿಫಿಕೇಷನ್ ಸೇರಿ 8 ವಿವಿಧ ವೆರಿಫಿಕೇಷನ್​​ಗಳು ಆನ್‌ಲೈನ್​​ನಲ್ಲಿ ಅರ್ಜಿ ಲಭ್ಯವಾಗಲಿದೆ. ಹೀಗಾಗಿ ಸಂಬಂಧಿಸಿದ ಇಲಾಖೆ ಅಥವಾ ಪೊಲೀಸ್ ಕ್ವಾಟ್ರಸ್​ಗಳಿಗೆ ಹೋಗುವ ಅವಶ್ಯಕತೆ ಇಲ್ಲವೆಂದು ಈ ಕುರಿತು ಸ್ವತಃ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಟ್ವೀಟ್ ಮಾಡಿ ತಿಳಿಸಿದ್ದಾರೆ‌.

ಕೊರೊನಾ ಸರಪಳಿ ಮುರಿಯಲು ಈ ನಿರ್ಧಾರ ಕೈಗೊಳ್ಳಲಾಗಿದ್ದು, ಹಾಗೆ ಸಾರ್ವಜನಿಕರಿಗೆ ಇದು ಬಹಳಷ್ಟು ಉಪಯೋಗಕರವಾಗಿದೆ. ಯಾಕಂದ್ರೆ, ಈ ಕೊರೊನಾ ಸಮಯದಲ್ಲಿ ಅಲೆದಾಡುವ ಪರಿಸ್ಥಿತಿ ಇರುವುದಿಲ್ಲ. ಬದಲಾಗಿ ಕೂತಲ್ಲೇ ಆನ್​​ಲೈನ್ ವೆರಿಫೈ ಮಾಡಿಕೊಳ್ಳಬಹುದು.

ABOUT THE AUTHOR

...view details