ಕರ್ನಾಟಕ

karnataka

ETV Bharat / state

ಇಲಾಖೆಯಿಂದ ಪೊಲೀಸ್​ ಸಿಬ್ಬಂದಿಗೆ ಸಿಕ್ತು ಸಿಹಿ ಸುದ್ದಿ: ಸುತ್ತೋಲೆ ಹೊರಡಿಸಿದ ಡಿಜಿಪಿ - DGP Praveen Sood Circular

ಈ ಹಿಂದೆ ವಾರದಲ್ಲಿ‌‌ ಒಂದು ದಿನ ರಜೆ ಕಡ್ಡಾಯ ಎಂದು ಆದೇಶ ಹೊರಡಿಸಿದ್ದರೂ ಪಾಲನೆಯಾಗಿರಲಿಲ್ಲ.‌ ಇದೀಗ ರಜೆ ಕಡ್ಡಾಯಗೊಳಿಸುವಂತೆ ರಾಜ್ಯ‌ ಪೊಲೀಸ್ ಮಹಾ‌ನಿರ್ದೇಶಕ ಪ್ರವೀಣ್ ಸೂದ್ ಸುತ್ತೋಲೆ ಹೊರಡಿಸಿದ್ದಾರೆ.

dgp-praveen-sood-circular-to-make-mandatory-one-day-holiday-a-week
ಡಿಜಿಪಿ ಪ್ರವೀಣ್ ಸೂದ್

By

Published : Jan 28, 2021, 5:52 PM IST

ಬೆಂಗಳೂರು: ಸಿಬ್ಬಂದಿಗೆ ವಾರದಲ್ಲಿ‌ ಒಂದು ದಿನ ರಜೆ ಕಡ್ಡಾಯಗೊಳಿಸುವಂತೆ ರಾಜ್ಯ‌ ಪೊಲೀಸ್ ಮಹಾ‌ನಿರ್ದೇಶಕ ಪ್ರವೀಣ್ ಸೂದ್ ಸುತ್ತೋಲೆ ಹೊರಡಿಸಿದ್ದಾರೆ.

ಈ ಹಿಂದೆ ವಾರದಲ್ಲಿ‌‌ ಒಂದು ದಿನ ರಜೆ ಕಡ್ಡಾಯ ಎಂದು ಆದೇಶ ಹೊರಡಿಸಿದ್ದರೂ ಪಾಲನೆಯಾಗಿರಲಿಲ್ಲ.‌ ಹೀಗಾಗಿ, ವಾರದ ರಜೆಯನ್ನು ಠಾಣಾಧಿಕಾರಿಗಳು ನೀಡುತ್ತಿಲ್ಲ ಎಂದು ಕೆಲ ಪೊಲೀಸ್ ಸಿಬ್ಬಂದಿ ಪ್ರವೀಣ್​ ಸೂದ್ ಗೆ ಪತ್ರ ಬರೆದಿದ್ದರು.

ಓದಿ:ಶ್ರೀರಾಮುಲುರನ್ನು ಡಿಸಿಎಂ ಮಾಡಿ ಎಂದ ಕಾರ್ಯಕರ್ತ : ನಳೀನ್​ ಕುಮಾರ್​ ಕೆಂಡಾಮಂಡಲ!

ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್​ ಮಹಾನಿರ್ದೇಶಕರು ಮತ್ತೊಮ್ಮೆ ವಾರದ ರಜೆ ಕಡ್ಡಾಯಗೊಳಿಸುವಂತೆ ನಗರ ಪೊಲೀಸ್ ಆಯುಕ್ತರು, ವಲಯ ಐಜಿಪಿ, ಜಿಲ್ಲಾ ಎಸ್ಪಿಗಳಿಗೆ ತುರ್ತು ಪರಿಸ್ಥಿತಿ ಹೊರತುಪಡಿಸಿ ಬೇರೆ ಎಲ್ಲ ಸಂದರ್ಭದಲ್ಲಿ ವಾರದ ರಜೆ ಕಡ್ಡಾಯವಾಗಿ ತೆಗೆದುಕೊಳ್ಳಲು ಅವಕಾಶ ಕಲ್ಪಿಸುವಂತೆ ಆದೇಶ ಹೊರಡಿಸಿದ್ದಾರೆ.

ABOUT THE AUTHOR

...view details