ಬೆಂಗಳೂರು: ದೇಶದ ಪ್ರತಿಷ್ಟಿತ ಕೇಂದ್ರ ಸರಕಾರಿ ಸ್ವಾಮ್ಯದ ವಿಮಾನ ತಯಾರಿಕಾ ಕಾರ್ಖಾನೆ ಹೆಚ್ಎಎಲ್ ನಿರ್ಮಿತ ನೂತನ 19 ಪ್ರಯಾಣಿಕರ ಸಾಮರ್ಥ್ಯದ '' ಹಿಂದುಸ್ತಾನ್ - 228 ಏರ್ ಕ್ರಾಫ್ಟ್'' ಮಾರ್ಪಾಡಿಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ಒಪ್ಪಿಗೆ ಕೊಟ್ಟಿದೆ. ಈ ಹೊಸ ಮಾದರಿಯ 19 ಪ್ರಯಾಣಿಕರ ಸೌಲಭ್ಯದ ವಿಮಾನವು 5,695 ಕೆಜಿ ಟೇಕ್ ಆಫ್ ಗರಿಷ್ಠ ತೂಕದ ಸಾಮರ್ಥ್ಯ ಹೊಂದಿದೆ. ''ಹಿಂದುಸ್ತಾನ್ 228 ಏರ್ಕ್ರಾಫ್ಟ್'' ಹಲವಾರು ವಿಶೇಷತೆಗಳಿಂದ ಕೂಡಿದ್ದು ಉಳಿದ ಸಾಮಾನ್ಯ ವಿಮಾನಗಳಿಗೆ ಹೋಲಿಸಿದರೆ ಇದರ ಚಾಲನೆ ಪೈಲಟ್ಗಳಿಗೆ ಸುಲಭವಾಗಲಿದೆ.
ಹೊಸ ಮಾದರಿಯ ಏರ್ ಕ್ರಾಫ್ಟ್ ಉಪ-5,700 ಕೆಜಿ ವಿಮಾನ ವಿಭಾಗಕ್ಕೆ ಸೇರುತ್ತದೆ. ಈ ಮಾದರಿಯ ವಿಮಾನದ ನಿರ್ವಹಣೆ ಕಡಿಮೆ ವೆಚ್ಚದಾಯಕ. ನಿರ್ವಾಹಕರಿಗೆ ಹತ್ತಾರು ಅನುಕೂಲತೆಗಳು ವಿಮಾನದಲ್ಲಿ ದೊರೆಯಲಿದೆ ಎಂದು ಹೆಚ್ಎಎಲ್ನ ಪ್ರಧಾನ ಕಚೇರಿಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.