ಬೆಂಗಳೂರು: ಲಾಕ್ಡೌನ್ 4.0 ಸಡಿಲಿಕೆ ಬೆನ್ನಲ್ಲೇ ಬೇರೆ ಬೇರೆ ಜಿಲ್ಲೆಗಳಿಗೆ ತೆರಳುವವರಿಗೆ ಪಾಸ್ ಅವಶ್ಯಕತೆಯಿಲ್ಲ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅಧಿಕೃತವಾಗಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಅಂತರ್ ಜಿಲ್ಲಾ ಪ್ರಯಾಣಕ್ಕೆ ಪಾಸ್ ಗೊಂದಲ ವಿಚಾರ: ಡಿಜಿಪಿ ಯಿಂದ ಮಹತ್ವದ ಆದೇಶ - D.G And IGP Latest news
ಅಂತರ್ ಜಿಲ್ಲೆಗಳ ಪ್ರಯಾಣಕ್ಕೆ ಕಡಿವಾಣ ಹಾಕಿದ್ದ ಸರ್ಕಾರ ಈಗ ಜನತೆಗೆ ಕೊಂಚ ರಿಲೀಫ್ ನೀಡಿದೆ. ಅಂತರ್ ಜಿಲ್ಲಾ ಪ್ರಯಾಣಕ್ಕೆ ಪಾಸ್ ಅಗತ್ಯವಿಲ್ಲ ಎಂದು ಡಿಜಿಪಿ ಪ್ರವೀಣ್ ಸೂದ್ ಟ್ವೀಟ್ ಮಾಡಿದ್ದಾರೆ.
ರಾಜ್ಯದ ಅಂತರ್ ಜಿಲ್ಲಾ ಪ್ರಯಾಣಕ್ಕೆ ಪಾಸ್ ಗೊಂದಲ
ಬೇರೆ ಬೇರೆ ಜಿಲ್ಲೆಗಳಿಗೆ ಹೋಗಿ ಬರಲು ಜನರಿಗೆ ಅವಕಾಶ ಇದೆ. ಆದ್ರೆ ಸಂಜೆ 7 ರಿಂದ ಬೆಳಗ್ಗೆ 7 ಗಂಟೆಯೊಳಗಿನ ಲಾಕ್ ಡೌನ್ ಎಂದಿನಂತೆ ಇರುತ್ತಿದ್ದು, ಅದನ್ನು ಮರೆಯದಿರಿ ಎಂದು ಜನತೆಗೆ ಪ್ರವೀಣ್ ಸೂದ್ ಹೇಳಿದ್ದಾರೆ.
Last Updated : May 20, 2020, 8:58 PM IST