ಕರ್ನಾಟಕ

karnataka

ETV Bharat / state

ಬೆಂಗಳೂರು ಪೊಲೀಸರೊಂದಿಗೆ ಡಿಜಿ - ಐಜಿಪಿ‌ ಪ್ರವೀಣ್ ಸೂದ್ ಸಭೆ.. ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚೆ - DG-IGP Conduct meeting with bengaluru police

ನಗರದಲ್ಲಿ ಕಾನೂನು ಸುವ್ಯವಸ್ಥೆ, ಹಾಗೂ ಅಪರಾಧ ನಿಯಂತ್ರಣ, ಸೂಕ್ಷ್ಮ ವಿಚಾರಗಳಲ್ಲಿ ಕಾನೂನು ಸುವ್ಯವಸ್ಥೆ ಪಾಲನೆಗೆ ಕೈಗೊಂಡ ಕ್ರಮಗಳು, ತೊಡಕುಗಳ ಬಗ್ಗೆ ರಾಜ್ಯ ಪೊಲೀಸ್ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಸಭೆ ನಡೆಸಿದ್ದಾರೆ.

ಬೆಂಗಳೂರು ಪೊಲೀಸರೊಂದಿಗೆ ಡಿಜಿ - ಐಜಿಪಿ‌ ಪ್ರವೀಣ್ ಸೂದ್ ಸಭೆ
ಬೆಂಗಳೂರು ಪೊಲೀಸರೊಂದಿಗೆ ಡಿಜಿ - ಐಜಿಪಿ‌ ಪ್ರವೀಣ್ ಸೂದ್ ಸಭೆ

By

Published : Apr 6, 2022, 6:43 PM IST

ಬೆಂಗಳೂರು: ಹಲಾಲ್, ಆಜಾನ್ ವಿವಾದದ ಕಾವು‌ ಜೋರಾಗಿರುವ ಬೆನ್ನಲ್ಲೇ ಬೆಂಗಳೂರು ಪೊಲೀಸರೊಂದಿಗೆ ರಾಜ್ಯ ಪೊಲೀಸ್ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಸಭೆ ನಡೆಸಿದ್ದಾರೆ. ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸಂಜೆ‌ 4 ಗಂಟೆಗೆ ಆರಂಭವಾದ ಸಭೆಯಲ್ಲಿ‌ ಪೊಲೀಸ್ ಆಯುಕ್ತ ಕಮಲ್ ಪಂತ್, ಹೆಚ್ಚುವರಿ ಆಯುಕ್ತರು ಹಾಗೂ ಡಿಸಿಪಿಗಳು ಭಾಗಿಯಾಗಿದ್ದರು.

ನಗರದಲ್ಲಿ ಕಾನೂನು ಸುವ್ಯವಸ್ಥೆ, ಹಾಗೂ ಅಪರಾಧ ನಿಯಂತ್ರಣ, ಸೂಕ್ಷ್ಮ ವಿಚಾರಗಳಲ್ಲಿ ಕಾನೂನು ಸುವ್ಯವಸ್ಥೆ ಪಾಲನೆಗೆ ಕೈಗೊಂಡ ಕ್ರಮಗಳು, ತೊಡಕುಗಳ ಬಗ್ಗೆ ಚರ್ಚೆ ಕೈಗೊಳ್ಳಲಾಗಿದೆ. ಬೆಂಗಳೂರು ಪೊಲೀಸರಿಗೆ ಡಿಜಿ & ಐಜಿಪಿ ಕಾನೂನು ಸುವ್ಯವಸ್ಥೆ ಕಾಪಾಡುವ ಕುರಿತು ಸಲಹೆಗಳನ್ನು ನೀಡಿದ್ದಾರೆ ಎನ್ನಲಾಗ್ತಿದೆ.

ಓದಿ:ನಾಳೆ ಶಕ್ತಿಧಾಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ

ABOUT THE AUTHOR

...view details