ಕರ್ನಾಟಕ

karnataka

ETV Bharat / state

ಅಗ್ನಿ ಅನಾಹುತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ: ಅಗ್ನಿಶಾಮಕ ಡಿಜಿ ಅಮರ್ ಕುಮಾರ್ ಪಾಂಡೆ - ಅಮರ್ ಕುಮಾರ್ ಪಾಂಡೆ

ಕೆಮಿಕಲ್ ಫ್ಯಾಕ್ಟರಿಯಲ್ಲಿ ನಡೆದ ಅಗ್ನಿ ದುರಂತ ಸ್ಥಳಕ್ಕೆ ಅಗ್ನಿಶಾಮಕ‌ ಇಲಾಖೆಯ ಡಿಜಿಪಿ ಅಮರ್ ಕುಮಾರ್ ಪಾಂಡೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Amar Kumar Pandey
ಅಮರ್ ಕುಮಾರ್ ಪಾಂಡೆ

By

Published : Nov 10, 2020, 6:04 PM IST

ಬೆಂಗಳೂರು: ಮೈಸೂರು ರಸ್ತೆಯ ಬಾಪೂಜಿ ನಗರದ ಕೆಮಿಕಲ್ ಫ್ಯಾಕ್ಟರಿಯಲ್ಲಿ ನಡೆದ ಅಗ್ನಿ ದುರಂತ ಹಿನ್ನೆಲೆಯಲ್ಲಿ‌ ಅಗ್ನಿಶಾಮಕ‌ ಇಲಾಖೆಯ ಡಿಜಿಪಿ ಅಮರ್ ಕುಮಾರ್ ಪಾಂಡೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಘಟನೆ ಬಗ್ಗೆ ಕಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದು ಮುಂದೆ ನಡೆಯಬೇಕಾದ ರಕ್ಷಣಾ ಕಾರ್ಯಾಚರಣೆ ಬಗ್ಗೆ ಸೂಚನೆ ನೀಡಿದ್ದಾರೆ. ‌

ಅಗ್ನಿಶಾಮಕ ಇಲಾಖೆಯ ಡಿಜಿ, ಅಮರ್ ಕುಮಾರ್ ಪಾಂಡೆ

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸುಮಾರು 30 ವರ್ಷಗಳಿಂದ‌ ಸುಜನ್ ರಾಜ್ ಎಂಬುವರು ಫ್ಯಾಕ್ಟರಿ ನಡೆಸುತ್ತಿದ್ದರು. ಕಾರ್ಖಾನೆಯಲ್ಲಿ ಸ್ಯಾನಿಟೈಸರ್ ತಯಾರಿಸುತ್ತಿದ್ದರು. ಸದ್ಯ ಮಾಲೀಕನ ಪೋನ್ ಸ್ವಿಚ್ ಆಫ್ ಬರುತ್ತಿದೆ. ಡ್ರೈವರ್ ಒಬ್ಬನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದಾಗಿ ತಿಳಿಸಿದರು.

ರೋಡ್​ನಲ್ಲಿ ಕೆಮಿಕಲ್ ಅನ್ ಲೋಡ್ ಮಾಡುವಾಗ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. ನಾಪತ್ತೆಯಾಗಿರುವ ಫ್ಯಾಕ್ಟರಿ ಮಾಲೀಕ ಸುಜನ್ ರಾಜ್​ನನ್ನೂ ತನಿಖೆ ಮಾಡುವುದಾಗಿ ಡಿಜಿಪಿ ಅಮರ್ ಕುಮಾರ್ ಪಾಂಡೆ ತಿಳಿಸಿದ್ದಾರೆ‌.

ABOUT THE AUTHOR

...view details