ದೊಡ್ಡಬಳ್ಳಾಪುರ :ಕೊರೊನಾ ಮೂರನೇ ಅಲೆ ಪ್ರಾರಂಭವಾಗಿದ್ದು, ಕೊರೊನಾ ವೈರಸ್ ವೇಗವಾಗಿ ಹರಡುತ್ತಿದೆ. ಸರ್ಕಾರ ಲಾಕ್ಡೌನ್ ಮಾಡುವ ಹಂತದಲ್ಲಿದೆ. ಆದರೆ, ಇದ್ಯಾವುದರ ಪರಿಜ್ಞಾನವೇ ಇಲ್ಲದೆ ದೊಡ್ಡಬಳ್ಳಾಪುರದಿಂದ ಸಾವಿರಾರು ಸಂಖ್ಯೆಯಲ್ಲಿ ತಮಿಳುನಾಡಿನ ಮೇಲ್ ಮಾವತ್ತೂರಿನ ಓಂ ಶಕ್ತಿ ದೇವಾಲಯದ ಪ್ರವಾಸಕ್ಕೆ ಹೋಗಿ ಬರುತ್ತಿದ್ದಾರೆ. ಇದನ್ನ ಕಂಡು ಕಾಣದಂತೆ ಜಿಲ್ಲಾಡಳಿತ ಕೈಕಟ್ಟಿ ಕುಳಿತಿದೆ ಎಂಬ ಆರೋಪ ಕೇಳಿ ಬಂದಿದೆ.
ತಮಿಳುನಾಡಿನ ಮೇಲ್ ಮಾವತ್ತೂರಿನ ಓಂ ಶಕ್ತಿ ದೇವಾಲಯಕ್ಕೆ ಮಾಲೆ ಧರಿಸಿದ ಮಹಿಳೆಯರು ಪ್ರವಾಸಕ್ಕೆ ಹೋಗುವ ಸಂಪ್ರದಾಯ ಇದೆ. ಬಡ ಭಕ್ತರಿಗೆ ಅನುಕೂಲ ಮಾಡಿಕೊಡುವ ಕಾರಣಕ್ಕೆ ಬಿಜೆಪಿ ಯುವ ಮುಖಂಡರಾದ ಧೀರಜ್ ಮುನಿರಾಜು ತಮ್ಮ ಸ್ವಂತ ಹಣದಲ್ಲಿ ತಾಲೂಕಿನ ಓಂ ಶಕ್ತಿ ಭಕ್ತರನ್ನ ತಮಿಳುನಾಡು ಮೇಲ್ ಮಾವತ್ತೂರಿಗೆ ಕಳುಹಿಸಿ ಕೊಡುತ್ತಿದ್ದಾರೆ.
ಪ್ರತಿ ಮಂಗಳವಾರ ಮತ್ತು ಶುಕ್ರವಾರದಂದು ಮಾಲಾಧಾರಿಗಳನ್ನು ತಂಡ ತಂಡವಾಗಿ ಕಳುಹಿಸುತ್ತಿದ್ದಾರೆ. ಡಿಸೆಂಬರ್ 10 ರಿಂದ ಓಂ ಶಕ್ತಿ ದೇವಾಲಯದ ಪ್ರವಾಸಕ್ಕೆ ಕಳುಹಿಸಿದ್ದು ಈಗಾಗಲೇ 85 ಬಸ್ಗಳಲ್ಲಿ 5 ಸಾವಿರಕ್ಕೂ ಹೆಚ್ಚು ಭಕ್ತರನ್ನು ಕಳುಹಿಸಲಾಗಿದೆ. ಜನವರಿ 15ರ ವರೆಗೂ ಭಕ್ತರನ್ನು ಕಳುಹಿಸುವ ವ್ಯವಸ್ಥೆ ಮಾಡಿದ್ದು, ಇನ್ನೂ 5 ಸಾವಿರಕ್ಕೂ ಹೆಚ್ಚು ಭಕ್ತರು ತಮಿಳುನಾಡು ಪ್ರವಾಸಕ್ಕೆ ಹೊರಡಲು ಸಿದ್ದತೆ ನಡೆಸಿದ್ದಾರೆ.
ದೇಶದ್ಯಾಂತ ಕೊರೊನಾ 3ನೇ ಅಲೆಯ ಆತಂಕ ಶುರುವಾಗಿದ್ದು, ತಮಿಳುನಾಡಿನಲ್ಲಿ 3ನೇ ಅಲೆ ವೇಗವನ್ನು ಪಡೆದು ಕೊಂಡಿದೆ. ಮಂಡ್ಯ ಜಿಲ್ಲೆಯಿಂದ ತಮಿಳುನಾಡಿನ ಓಂ ಶಕ್ತಿ ದೇವಾಲಯಕ್ಕೆ ಭೇಟಿ ನೀಡಿ ಬಂದಿದ್ದ 30 ಕ್ಕೂ ಹೆಚ್ಚು ಭಕ್ತರಿಗೆ ಕೊರೊನಾ ಸೋಂಕು ಧೃಡಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.
ಇಂತಹ ಸಮಯದಲ್ಲಿ ದೊಡ್ಡಬಳ್ಳಾಪುರ ತಾಲೂಕಿನಿಂದ ಈಗಾಗಲೇ 5 ಸಾವಿರಕ್ಕೂ ಹೆಚ್ಚು ಭಕ್ತರು ಓಂ ಶಕ್ತಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ ಮತ್ತೆ 5 ಸಾವಿರ ಭಕ್ತರು ಪ್ರವಾಸಕ್ಕೆ ಸಿದ್ದತೆ ನಡೆಸಿದ್ದಾರೆ, ಪ್ರವಾಸಕ್ಕೆ ತಾಲೂಕು ಆಡಳಿತದಿಂದ ಅನುಮತಿ ಸಹ ಅಯೋಜಕರು ಪಡೆದಿಲ್ಲ ಜೊತೆಗೆ ಪ್ರವಾಸದಿಂದ ಹಿಂದುರುಗಿದವರನ್ನ ಕೊರೊನಾ ಪರೀಕ್ಷೆ ಸಹ ಮಾಡದಿರುವುದು ಆತಂಕಕ್ಕೆ ಕಾರಣವಾಗಿದೆ.
ಆ ದೇವಿಯೇ ಕಾಪಾಡ್ತಾಳೆ