ಬೆಂಗಳೂರು:ಸಿಲಿಕಾನ್ ಸಿಟಿ ಮೂಲದ ಸ್ಟಾರ್ಟ್‌ಅಪ್ ಮೈನಸ್ ಝೀರೋದಿಂದ ಚಾಲಕ ರಹಿತ ವಾಹನ 'ಝಡ್‌ಪಾಡ್' ಅಭಿವೃದ್ಧಿ ಪಡಿಸಲಾಗಿದ್ದು, ಡ್ರೈವರ್, ಸ್ಟೇರಿಂಗ್, ಮಷಿನ್ ಲರ್ನಿಂಗ್ ಅಗತ್ಯವಿಲ್ಲದೆ ಮತ್ತು 4 ಕ್ಯಾಮೆರಾಗಳೊಂದಿಗೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಜಾಗತಿಕವಾಗಿ ತೋರಿಸಿರುವ ಕೆಲವು ಸ್ವಯಂಚಾಲಿತ ವಾಹನಗಳಂತೆ ಟೋಸ್ಟರ್ ಆಕಾರದಲ್ಲಿರುವ ಝಡ್‌ಪಾಡ್ ಸ್ವಯಂಚಾಲಿತ ಕಾರು ತನ್ನ ಕ್ಯಾಮರಾ- ಸೆನ್ಸಾರ್ ಸೂಟ್ ಮೂಲಕ ಎಲ್ಲ ರೀತಿಯ ಪರಿಸ್ಥಿತಿಗಳು ಮತ್ತು ಹವಾಮಾನ ಇದ್ದಾಗಲೂ ಚಾಲನೆ ಮಾಡಿಕೊಂಡು ಹೋಗುವ ಸಾಮರ್ಥ್ಯ ಹೊಂದಿದೆ.
ಸ್ಟೇರಿಂಗ್ ಚಕ್ರ ಇಲ್ಲದೇ ಇರುವುದೇ ಈ ವಾಹನದ ವೈಶಿಷ್ಟ್ಯ. ಟ್ರಾಫಿಕ್ ಸೇರಿ ಡ್ರೈವಿಂಗ್ ಪರಿಸ್ಥಿತಿಗಳನ್ನು ವಿಶ್ಲೇಷಿಸಲು ಆಯಕಟ್ಟಿನ ಜಾಗದಲ್ಲಿ ಇರಿಸಲಾಗಿರುವ ಹೈ ರೆಸಲ್ಯೂಶನ್ ಕ್ಯಾಮೆರಾಗಳ ಸರಣಿಯನ್ನು ಬಳಸುತ್ತದೆ.
ಚಾಲಕ ರಹಿತ ವಾಹನ 'ಝಡ್‌ಪಾಡ್' ಅಭಿವೃದ್ಧಿ ಕ್ಯಾಮೆರಾ- ಸೆನ್ಸಾರ್ ಸೂಟ್ ವಾಹನದ ಸುತ್ತಮುತ್ತಲಿನ ನೈಜ ಸಮಯದ ಚಿತ್ರಗಳನ್ನು ಸೆರೆಹಿಡಿಯಬಹುದು. ಅದರಲ್ಲಿರುವ ಕೃತಕ ಬುದ್ಧಿಮತ್ತೆ ವ್ಯವಸ್ಥೆಯೊಂದಿಗೆ ಆ ಚಿತ್ರಗಳನ್ನು ಶೇರ್ ಕೂಡ ಮಾಡುತ್ತದೆ. ಇಷ್ಟಾದ ನಂತರ ರಸ್ತೆಯಲ್ಲಿನ ಅಡೆತಡೆಗಳನ್ನು ತಪ್ಪಿಸಲು, ಅದರ ವೇಗವನ್ನು ನಿಯಂತ್ರಿಸಲು ಮತ್ತು ನಿಲ್ಲಿಸಲು ವಾಹನವನ್ನು ಸರಿಯಾದ ದಾರಿಯಲ್ಲಿ ಚಲಿಸುವಂತೆ ಮಾಡಲು ಚಿತ್ರಗಳ ಮೂಲಕ ಮಾಹಿತಿಯನ್ನು ಒದಗಿಸುವ ಪ್ರಕ್ರಿಯೆ ಈ ವಾಹನದಲ್ಲಿ ಇದೆ.
ಇತ್ತೀಚೆಗಷ್ಟೇ ಅನಾವರಣಗೊಂಡಿರುವ ಈ ಪ್ರಾಯೋಗಿಕ ವಾಹನದಲ್ಲಿ ಬಳಸಲಾಗಿರುವ ತಂತ್ರಜ್ಞಾನವು ಅಡ್ವಾನ್ಸ್ಡ್ ಡ್ರೈವಿಂಗ್ ಅಸಿಸ್ಟೆನ್ಸ್ ಸಿಸ್ಟಮ್ಸ್ ಹೊಂದಿದೆ. ವಾಹನದ 4 ಬದಿಗಳಲ್ಲಿ ಅಳವಡಿಸಲಾಗಿರುವ ಕ್ಯಾಮೆರಾಗಳು ಸುತ್ತಮುತ್ತಲಿನ ಚಿತ್ರಗಳನ್ನು ಕೃತಕ ಬುದ್ದಿಮತ್ತೆ ಆಧಾರಿತ ವ್ಯವಸ್ಥೆ ಒಳಗೊಂಡಿದೆ. ವಾಹನದಲ್ಲಿರುವ ಸುತ್ತಮುತ್ತಲಿನ ಅಳೆಯಲು ಸಾಧ್ಯವಾಗುತ್ತದೆ ಎಂದು ಕಂಪನಿ ಸಿಇಒ ಗಗನ್‌ದೀಪ್ ರೆಹಾಲ್ ವಿವರಿಸಿದ್ದಾರೆ.
ಚಾಲಕ ರಹಿತ ವಾಹನ 'ಝಡ್‌ಪಾಡ್' ಅಭಿವೃದ್ಧಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಕೃತಕ ಬುದ್ಧಿಮತ್ತೆ ಆಧಾರಿತ ವಾಹನಗಳು ಲೈಟ್ ಡಿಟೆಕ್ಷನ್ ಮತ್ತು ರೇಂಜಿಂಗ್ ಹೊಂದಿರಬೇಕು. ಝಡ್ಪಾಡ್ನಲ್ಲಿ ಟ್ರೂ ವಿಷನ್ ಅಟಾನಮಿ ತಂತ್ರಜ್ಞಾನದಿಂದ ಅವುಗಳ ಅಗತ್ಯವಿಲ್ಲದೆ ಚಲಾಯಿಸಬಹುದು. ದುಬಾರಿ ಹಾರ್ಡ್‌ವೇರ್, ಡೇಟಾ, ಕ್ಲಿಷ್ಟಕರ ಟ್ರಾಫಿಕ್ ಮತ್ತು ಅಪಘಾತಗಳನ್ನು ನಿವಾರಿಸಲು ಈ ತಂತ್ರಜ್ಞಾನವನ್ನು ಬಳಸಲಾಗುತ್ತದೆ ಎಂದಿದ್ದಾರೆ. ಸದ್ಯ ಕಾಲೇಜುಗಳ ಆವರಣ ಮತ್ತು ಕಟ್ಟಡ ಸಂಕೀರ್ಣಗಳಲ್ಲಿ ಸಂಚರಿಸಲು ಈ ರೀತಿಯ ವಾಹನಗಳನ್ನು ಬಳಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಸಹ ಸಂಸ್ಥಾಪಕ ಗುರ್‌ಸಿಮ್ರನ್ ಕಾಲ್ರ ಮಾತನಾಡಿ, ವಾಹನ ಉದ್ಯಮದಲ್ಲಿ ಈ ತಂತ್ರಜ್ಞಾನದ ಅಳವಡಿಕೆ ಹೊಸ ಕ್ರಾಂತಿಗೆ ಕಾರಣವಾಗಲಿದೆ. ವಾಹನ ಚಾಲನೆಯ ಚಿಂತೆ ಇಲ್ಲದೆ ಸುರಕ್ಷಿತ ಭಾವದಿಂದ ಇದರಲ್ಲಿ ಪ್ರಯಾಣ ಮಾಡಬಹುದು. ಮುಂದಿನ ದಿನಗಳಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಪ್ರಾಯೋಗಿಕ ನಡೆಸಿ ವಾಹನ ವಿನ್ಯಾಸ ಸೇರಿ ಮತ್ತಷ್ಟು ಅಭಿವೃದ್ಧಿಯಾಗಲಿದೆ. ಮುಂದಿನ ಎರಡು ವರ್ಷದಲ್ಲಿ ಜಾಗತಿಕ ಮಾರುಕಟ್ಟೆಯ ದೃಷ್ಟಿಕೋನದಿಂದ ಇದನ್ನು ರೂಪಿಸಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ:ಜುಲೈ 1ರ ವೇಳೆಗೆ ಐಫೋನ್ ತಯಾರಿಕಾ ಕಂಪನಿ ಫಾಕ್ಸ್ಕಾನ್ಗೆ ಪೂರ್ತಿ ಭೂಮಿ ಹಸ್ತಾಂತರ: ಸಚಿವ ಎಂಬಿ ಪಾಟೀಲ್