ಬೆಂಗಳೂರು: ಮೊದಲಿನಿಂದಲೂ ದೇವೇಗೌಡರು ಜಾತ್ಯಾತೀತ ನಿಲುವಿನಲ್ಲಿ ನಂಬಿಕೆ ಇಟ್ಟವರು. ಸಭಾಪತಿ ಸ್ಥಾನ ಹೊಂದಾಣಿಕೆಗೆ ಅವರು ಬಿಜೆಪಿ ಜೊತೆ ಹೋಗದಿರೋದು ಸೂಕ್ತ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ ಮನವಿ ಮಾಡಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಮೇಲ್ಮನೆ ಸಭಾಪತಿ, ಉಪ ಸಭಾ ಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಮೊನ್ನೆಯಷ್ಟೇ ಉಪಸಭಾಪತಿ ಚುನಾವಣೆ ನಡೆದಿದೆ. ಸಭಾಪತಿ ಸ್ಥಾನಕ್ಕೆ ರಾಜಿನಾಮೆ ಕೇಳಿದ್ದಾರೆ. ಈ ಬಗ್ಗೆ ಪರಿಷತ್‌ನಲ್ಲಿ ಚರ್ಚೆ ಆಗಲಿದೆ. ಮೊದಲಿನಿಂದಲೂ ದೇವೇಗೌಡರು ಜಾತ್ಯಾತೀತ ನಿಲುವಿನಲ್ಲಿ ನಂಬಿಕೆ ಇಟ್ಟವರು. ಸಭಾಪತಿ ಸ್ಥಾನ ಹೊಂದಾಣಿಕೆಗೆ ಅವರು ಬಿಜೆಪಿ ಜೊತೆ ಹೋಗದಿರೋದು ಸೂಕ್ತ. ಗೋಹತ್ಯೆ ನಿಷೇಧ ವಿಚಾರ ಬಂದಾಗ ಬಿಜೆಪಿ ನಿರ್ಧಾರ ತೆಗೆದುಕೊಂಡಿತ್ತು. ನನ್ನ ಅಭಿಪ್ರಾಯದಲ್ಲಿ ಎಲ್ಲಾ ಪ್ರಾಣಿ ಹತ್ಯೆ ನಿಲ್ಲಿಸಬೇಕು ಎಂದು ತಿಳಿಸಿದರು.
ದೆಹಲಿಯಲ್ಲಿ ರೈತರ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರೈತರು ಅನ್ನದಾತರು, ದೇಶದ ಬೆನ್ನೆಲುಬು ಅಂತ ಬಿಜೆಪಿಯವರು ಹೇಳ್ತಿದ್ರು. ಆದ್ರೆ ಬಿಜೆಪಿ ಹೇಳಿಕೆಯಲ್ಲಿ ಒಂದು, ಮನಸ್ಸಿನಲ್ಲಿ ಒಂದು ಇಟ್ಟುಕೊಂಡಿದ್ದಾರೆ ಎಂಬುದು ಸಾಬೀತಾಗಿದೆ ಎಂದು ಕಿಡಿ ಕಾರಿದರು.
ಖಲಿಸ್ತಾನದ ಪರ ಬಿಜೆಪಿ ಕಾರ್ಯಕರ್ತರೇ ಕರಪತ್ರ ಹಂಚಿದ್ದಾರೆ. ಕಾರ್ಯಕರ್ತರ ಹೆಸರಲ್ಲಿ ಬಿಜೆಪಿಯವರು ವೇಷ ಮರೆಸಿಕೊಂಡು ಬಂದಿದ್ರು. ರಸ್ತೆಯಲ್ಲಿ ಮೊಳೆ ಹೊಡೆದಿದ್ದಾರೆ. ಕಾಂಕ್ರೀಟ್ ದಿಬ್ಬ ಹಾಕಿ ಅಡ್ಡಗಟ್ಟಿದ್ದಾರೆ. ರೈತರ ಹೆಸರಲ್ಲಿ ಅವರ ಮುಖವಾಡ ಹೊರ ಬಂದಿದೆ. ಮುಂದಿನ ದಿನಗಳಲ್ಲಿ ಬಿಜೆಪಿಯವರು ಇದಕ್ಕೆಲ್ಲಾ ಪರಿಣಾಮ ಅನುಭವಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.
ದೇವೇಗೌಡರು ಸಭಾಪತಿ ಸ್ಥಾನಕ್ಕಾಗಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡದಿರುವುದು ಸೂಕ್ತ: ರಾಮಲಿಂಗ ರೆಡ್ಡಿ - Ramalinga reddy on bjp and jds align
ದೆಹಲಿಯಲ್ಲಿ ರೈತರ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರೈತರು ಅನ್ನದಾತರು, ದೇಶದ ಬೆನ್ನೆಲುಬು ಅಂತ ಬಿಜೆಪಿಯವರು ಹೇಳ್ತಿದ್ರು. ಆದ್ರೆ ಬಿಜೆಪಿ ಹೇಳಿಕೆಯಲ್ಲಿ ಒಂದು, ಮನಸ್ಸಿನಲ್ಲಿ ಒಂದು ಇಟ್ಟುಕೊಂಡಿದ್ದಾರೆ ಎಂಬುದು ಸಾಬೀತಾಗಿದೆ ಎಂದು ಕಿಡಿ ಕಾರಿದರು.
ರಾಮಲಿಂಗ ರೆಡ್ಡಿ