ಕರ್ನಾಟಕ

karnataka

ETV Bharat / state

ಶಂಕರಾಚಾರ್ಯರ ಜಯಂತಿಗೆ ಶುಭ ಕೋರಿದ ದೇವೇಗೌಡರು... - ಭಾರತದ ಧಾರ್ಮಿಕತೆಯ ಮೇರು ವ್ಯಕ್ತಿಯಾಗಿರುವ ಶಂಕರಾಚಾರ್ಯರು

ಭಾರತದ ಧಾರ್ಮಿಕತೆಯ ಮೇರು ವ್ಯಕ್ತಿಯಾಗಿರುವ ಶಂಕರಾಚಾರ್ಯರು ಮಾನವ ಕುಲವೆಲ್ಲ ಒಂದೇ ಎನ್ನುವ ಮೂಲಕ ಸಾಮಾಜಿಕ ನ್ಯಾಯವನ್ನು ಎಂಟನೆಯ ಶತಮಾನದಲ್ಲೇ ಜಗತ್ತಿಗೆ ಸಾರಿ ಹೇಳಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಟ್ವೀಟ್ ಮಾಡಿದ್ದಾರೆ.

Breaking News

By

Published : Apr 28, 2020, 1:29 PM IST

ಬೆಂಗಳೂರು : ಜಗದ್ಗುರು ಆದಿ ಶಂಕರಾಚಾರ್ಯರ ಜಯಂತಿ ಅಂಗವಾಗಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ನಾಡಿನ ಜನತೆಗೆ ಶುಭಾಶಯ ಕೋರಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಗೌಡರು, ಶಂಕರಾಚಾರ್ಯರ ಚಿಂತನೆಗಳು ಸರ್ವ ಸಮಾಜವನ್ನು ಒಗ್ಗೂಡಿಸುವುದಕ್ಕೆ ಪ್ರೇರಕವಾಗಿತ್ತು. ಭಾರತದ ಧಾರ್ಮಿಕತೆಯ ಮೇರು ವ್ಯಕ್ತಿಯಾಗಿರುವ ಶಂಕರಾಚಾರ್ಯರು ಮಾನವ ಕುಲವೆಲ್ಲ ಒಂದೇ ಎನ್ನುವ ಮೂಲಕ ಸಾಮಾಜಿಕ ನ್ಯಾಯವನ್ನು ಎಂಟನೆಯ ಶತಮಾನದಲ್ಲೇ ಜಗತ್ತಿಗೆ ಸಾರಿ ಹೇಳಿದ ಮಹಾನ್ ದಾರ್ಶನಿಕರು ಎಂದಿದ್ದಾರೆ.

For All Latest Updates

TAGGED:

Deve Gowda

ABOUT THE AUTHOR

...view details