ಬೆಂಗಳೂರು : ವರಮಹಾಲಕ್ಷ್ಮಿ ಹಬ್ಬದ ನಿಮಿತ್ತ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಹಾಗೂ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು, ನಾಡಿನ ಸಮಸ್ತ ಜನತೆಗೆ ಶುಭಾಶಯ ಕೋರಿದ್ದಾರೆ.
ವರಮಹಾಲಕ್ಷ್ಮಿ ಹಬ್ಬಕ್ಕೆ ಶುಭಾಶಯ ಕೋರಿದ ದೇವೇಗೌಡ, ಕುಮಾರಸ್ವಾಮಿ
ವರ ಮಹಾಲಕ್ಷ್ಮಿ ವ್ರತವು ಸವಾಲುಗಳನ್ನು ಧೈರ್ಯದಿಂದ ಎದುರಿಸುವ ಶಕ್ತಿಯನ್ನು ಒದಗಿಸಲಿ, ಕಷ್ಟದ ಕಾರ್ಮೋಡಗಳು ಸರಿದು ಆಯುರಾರೋಗ್ಯ, ಸಂಪತ್ತು, ಸುಖ, ಶಾಂತಿ, ನೆಮ್ಮದಿ ನಿಮ್ಮದಾಗಲಿ ಎಂದು ಮಾಜಿ ಪ್ರಧಾನಿ ದೇವೇಗೌಡರು ಹಾರೈಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಈ ವರ ಮಹಾಲಕ್ಷ್ಮಿ ವ್ರತವು ನಿಮಗೆ ಜೀವನದ ಎಲ್ಲ ಸವಾಲುಗಳನ್ನು ಧೈರ್ಯದಿಂದ ಎದುರಿಸುವ ಶಕ್ತಿಯನ್ನು ಒದಗಿಸಲಿ, ಕಷ್ಟದ ಕಾರ್ಮೋಡಗಳು ಸರಿದು ಆಯುರಾರೋಗ್ಯ, ಸಂಪತ್ತು, ಸುಖ, ಶಾಂತಿ, ನೆಮ್ಮದಿ ನಿಮ್ಮದಾಗಲಿ ಎಂದು ದೇವೇಗೌಡರು ಹಾರೈಸಿದ್ದಾರೆ.
ಹೆಚ್ ಡಿಕೆ ಟ್ವೀಟ್:ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು. ತಮ್ಮೆಲ್ಲರಿಗೂ ಲಕ್ಷ್ಮೀದೇವಿ ಸುಖ, ಸಮೃದ್ಧಿ ನೀಡಲಿ ಎಂದು ಕೇಳಿಕೊಳ್ಳುತ್ತೇನೆ. ಕೊರೊನಾ ಸಂಕಷ್ಟದ ಈ ಸಮಯದಲ್ಲಿ ನಾವೆಲ್ಲರೂ ನಮ್ಮ ಮನೆಯೊಳಗಡೆಯೇ ಇದ್ದು ಮನೆಯವರೊಂದಿಗೆ ವರಮಹಾಲಕ್ಷ್ಮಿ ಹಬ್ಬ ಆಚರಿಸೋಣ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.