ಬೆಂಗಳೂರು:ಸಾಮಾಜಿಕ ಹೋರಾಟಗಾರ, ನಾಡೋಜ ಪ್ರಶಸ್ತಿ ಪುರಸ್ಕೃತ ಶತಾಯುಷಿ ಪಾಟೀಲ ಪುಟ್ಟಪ್ಪ ನಿಧನಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಪಾಟೀಲ ಪುಟ್ಟಪ್ಪ ವಿಧಿವಶ: ದೇವೇಗೌಡ, ಕುಮಾರಸ್ವಾಮಿ ಸಂತಾಪ - ಪಾಟೀಲ್ ಪುಟ್ಟಪ್ಪ ನಿಧನಕ್ಕೆ ದೇವೇಗೌಡ, ಕುಮಾರಸ್ವಾಮಿ ಸಂತಾಪ
ಸಾಹಿತಿ, ಪತ್ರಕರ್ತರು, ಮೇಲಾಗಿ ನಾಡಿನ ಭಾಷೆಯ ಹಿತಕ್ಕಾಗಿ ತಮ್ಮ ಜೀವಮಾನವಿಡೀ ದಣಿದ ನಾಡೋಜ ಪ್ರಶಸ್ತಿ ಪುರಸ್ಕೃತರಾದ ಡಾ. ಪಾಟೀಲ ಪುಟ್ಟಪ್ಪನವರು ವಿಧಿವಶರಾದ ಸುದ್ದಿ ಮನಸ್ಸಿಗೆ ವ್ಯಸನವನ್ನುಂಟು ಮಾಡಿದೆ ಎಂದು ಟ್ಟಿಟ್ ಮೂಲಕ ದೇವೇಗೌಡರು ಸಂತಾಪ ಸೂಚಿಸಿದ್ದಾರೆ.
![ಪಾಟೀಲ ಪುಟ್ಟಪ್ಪ ವಿಧಿವಶ: ದೇವೇಗೌಡ, ಕುಮಾರಸ್ವಾಮಿ ಸಂತಾಪ Deve gowda, kumaraswamy](https://etvbharatimages.akamaized.net/etvbharat/prod-images/768-512-6434759-thumbnail-3x2-sanju.jpg)
ಸಾಹಿತಿ, ಪತ್ರಕರ್ತರು, ಮೇಲಾಗಿ ನಾಡಿನ ಭಾಷೆಯ ಹಿತಕ್ಕಾಗಿ ತಮ್ಮ ಜೀವಮಾನವಿಡೀ ದಣಿದ ನಾಡೋಜ ಪ್ರಶಸ್ತಿ ಪುರಸ್ಕೃತರಾದ ಡಾ. ಪಾಟೀಲ ಪುಟ್ಟಪ್ಪನವರು ವಿಧಿವಶರಾದ ಸುದ್ದಿ ಮನಸಿಗೆ ವ್ಯಸನವನ್ನುಂಟು ಮಾಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ಅವರ ಕುಟುಂಬಸ್ಥರಿಗೆ ಹಾಗೂ ನಾಡಿನ ಜನತೆಗೆ ಆ ಭಗವಂತ ಕರುಣಿಸಲಿ ಎಂದು ಟ್ವೀಟ್ ಮೂಲಕ ದೇವೇಗೌಡರು ಸಂತಾಪ ವ್ಯಕ್ತಪಡಿಸಿದ್ದಾರೆ.
ಪಾಪು ಎಂಬ ಕಾವ್ಯನಾಮದಿಂದಲೇ ಖ್ಯಾತರಾದವರು ಪಾಟೀಲ ಪುಟ್ಟಪ್ಪ. ಕನ್ನಡ ಸಾಹಿತ್ಯ ಮತ್ತು ಪತ್ರಿಕಾ ರಂಗದಲ್ಲಿ ಬಹುದೊಡ್ಡ ಹೆಸರು ಗಳಿಸಿದವರು. ಬೆಳಗಾವಿಯಲ್ಲಿ ನಡೆದ 70ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಪಾಪು ಅವರು ಕನ್ನಡ ನಾಡು, ನುಡಿಗಾಗಿ ಜೀವನದುದ್ದಕ್ಕೂ ಶ್ರಮಿಸಿದವರು. ಇಂದು ಅವರು ನಮ್ಮನ್ನೆಲ್ಲ ಅಗಲಿದ್ದಾರೆ. ಅವರ ಸಾವು ಇಡೀ ಕರ್ನಾಟಕಕ್ಕೆ ತುಂಬಲಾರದ ಬಹುದೊಡ್ಡ ನಷ್ಟ. ಅವರ ಕುಟುಂಬದವರಿಗೆ ಮತ್ತು ಅನುಯಾಯಿಗಳಿಗೆ ಈ ದುಃಖ ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ. ಧೀಮಂತ ನಾಯಕನಿಗೆ ಭಾವಪೂರ್ವ ವಿದಾಯಗಳು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕಂಬನಿ ಮಿಡಿದಿದ್ದಾರೆ.