ಬೆಂಗಳೂರು: ಬಿಬಿಎಂಪಿ ಅಕ್ರಮ TDR ಪ್ರಕರಣದ ತನಿಖೆ ನಡೆಸುತ್ತಿರುವ ಎಸಿಬಿ, ಮಹದೇವಪುರ ವಲಯದ ಟಿಡಿಆರ್ ವಿಭಾಗದ ಹಿಂದಿನ ಸಹಾಯಕ ಅಭಿಯಂತರ ದೇವರಾಜ್ ಅವರನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದೆ.
ಬಿಬಿಎಂಪಿ ಅಕ್ರಮ ಟಿಡಿಆರ್ ಪ್ರಕರಣ: ಹಿಂದಿನ ಸಹಾಯಕ ಅಭಿಯಂತರ ದೇವರಾಜ್ ಬಂಧನ - ಬೆಂಗಳೂರು ಬಿಬಿಎಂಪಿ ಅಕ್ರಮ ಟಿಡಿಆರ್ ಪ್ರಕರಣ ಸುದ್ದಿ
ಬೆಂಗಳೂರು ಮಹಾನಗರ ಪಾಲಿಕೆಯ ಅಕ್ರಮ TDR ಪ್ರಕರಣದ ತನಿಖೆ ನಡೆಸುತ್ತಿರುವ ಎಸಿಬಿ, ಇದೀಗ ಟಿಡಿಆರ್ ಹಗರಣದಲ್ಲಿ ಭಾಗಿಯಾದ ಆರೋಪದ ಮೇಲೆ ಮಹದೇವಪುರ ವಲಯದ ಟಿಡಿಆರ್ ವಿಭಾಗದ ಹಿಂದಿನ ಸಹಾಯಕ ಅಭಿಯಂತರ ದೇವರಾಜ್ ಅವರನ್ನು ಬಂಧಿಸಿ ತನಿಖೆ ಆರಂಭಿಸಿದೆ. ಸದ್ಯ ಆನೆಮ್ಮ ಎಂಬುವವರಿಗೆ ಮೋಸ ಮಾಡಿರುವ ವಿಚಾರ ಬೆಳಕಿಗೆ ಬಂದಿದ್ದು, ತನಿಖೆ ಮುಂದುವರೆದಿದೆ.
ಬಿಬಿಎಂಪಿ ಅಕ್ರಮ ಟಿಡಿಆರ್ ಪ್ರಕರಣ
ಮಹಾದೇವಪುರ ವಿಭಾಗದ ಸಹಾಯಕ ಅಭಿಯಂತರ ದೇವರಾಜ್, ಬಿಬಿಎಂಪಿ ವತಿಯಿಂದ ಕೌದೇನಹಳ್ಳಿ ಬಳಿ ಆನೆಮ್ಮ ಎಂಬುವವರಿಗೆ ಸರ್ಕಾರ ವಿತರಣೆ ಮಾಡಿರುವ ಸೈಟಿನ (ಡಿ.ಆರ್.ಸಿ) ನಕಲಿ ದಾಖಲೆ ಸೃಷ್ಟಿಸಿ ವಾಸ್ತವ ಮಾಲೀಕತ್ವವನ್ನು ಮರೆಮಾಚಿ ಬಿಬಿಎಂಪಿ ಹಾಗೂ ಸರ್ಕಾರಕ್ಕೆ ನಷ್ಟ ಉಂಟುಮಾಡಿದ್ದರು ಎನ್ನವ ಆರೋಪವಿದೆ.
ಹೀಗಾಗಿ ಇಂದು ಸಹಾಯಕ ಅಭಿಯಂತರ ದೇವರಾಜ್ ಅವರನ್ನು ಬಂಧಿಸಿದ ಎಸಿಬಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದೆ. ಸದ್ಯ ಎಸಿಬಿ ತನಿಖೆ ವೇಳೆ ಆನೆಮ್ಮ ಅವರಿಗೆ ಮಾಡಿರುವ ವಿಚಾರ ಮಾತ್ರ ಬೆಳಕಿಗೆ ಬಂದಿದ್ದು, ತನಿಖೆ ಮುಂದುವರೆದಿದೆ.