ಕರ್ನಾಟಕ

karnataka

ETV Bharat / state

ದೇವನೂರು ಮಹಾದೇವ, ದೊರೆಸ್ವಾಮಿಯಿಂದ ಸ್ಪೀಕರ್​ಗೆ ಪತ್ರ - ಸ್ಫೀಕರ್​​ಗೆ ಪತ್ರ

ಹಿರಿಯ ಬರಹಗಾರರಾದ ದೇವನೂರ ಮಹಾದೇವ ಮತ್ತು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಅವರು ಶಾಸಕರ ರಾಜೀನಾಮೆ ಮತ್ತು ಅನರ್ಹತೆ ದೂರುಗಳನ್ನು ಪರಿಶೀಲಿಸುತ್ತಿರುವ ಸ್ಪೀಕರ್ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ.

ದೊರೆಸ್ವಾಮಿ, ದೇವನೂರು ಮಹಾದೇವ

By

Published : Jul 15, 2019, 11:37 PM IST

ಬೆಂಗಳೂರು: ಹಿರಿಯ ಬರಹಗಾರರಾದ ದೇವನೂರ ಮಹಾದೇವ ಮತ್ತು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಅವರು ಶಾಸಕರ ರಾಜೀನಾಮೆ ಮತ್ತು ಅನರ್ಹತೆ ದೂರುಗಳನ್ನು ಪರಿಶೀಲಿಸುತ್ತಿರುವ ಸ್ಪೀಕರ್ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ.

ದೇವನೂರು ಮಹಾದೇವ, ದೊರೆಸ್ವಾಮಿಯಿಂದ ಸ್ಪೀಕರ್​ಗೆ ಪತ್ರ

ಅಗತ್ಯಬಿದ್ದರೆ ಈ ಸಂಬಂಧ ಉನ್ನತ ನ್ಯಾಯಾಲಯಗಳಿಗೂ ಹೋಗಿ ಸಂವಿಧಾನವನ್ನು ಕಾಪಾಡುವ ಹೊಣೆ ಹಾಗೂ ಅಧಿಕಾರ ಹೊಂದಿರುವ ನ್ಯಾಯಾಧೀಶರಲ್ಲೂ ಮನವಿ ಮಾಡಬೇಕೆಂದು ತೀರ್ಮಾನಿಸಿದ್ದೇವೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಒಂದೇ ಪತ್ರದ ಎರಡು ಬೇರೆ ಬೇರೆ ಪ್ರತಿಗಳಿಗೆ (ಇಬ್ಬರೂ ಬೇರೆ ಬೇರೆ ಊರುಗಳಲ್ಲಿರುವುದರಿಂದ) ಇಬ್ಬರೂ ಸಹಿ ಮಾಡಿದ್ದಾರೆ.

ಶಾಸಕರು ತಮ್ಮ ಆತ್ಮವನ್ನೂ, ನಮ್ಮ ಮತವನ್ನೂ ಮಾರುತ್ತಿರುವ ಈ ಹೊತ್ತಿನಲ್ಲಿ ರಾಜ್ಯದ ಹಾಗೂ ರಾಜಕಾರಣದ ಘನತೆಯನ್ನು ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ.

ABOUT THE AUTHOR

...view details